ಸ್ಯಾನ್ ಫ್ರಾನ್ಸಿಸ್ಕೊ: ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಭೀಕರ ಕಾಳ್ಗಿಚ್ಚಿನ ಪರಿಣಾಮ ಬೆಂಕಿಯುಂಡೆಯ ಸುಂಟರಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಂಗಳವಾರ ಎಚ್ಚರಿಕೆ ನೀಡಿದೆ.
ಬೆಂಕಿ ನಂದಿಸಲು ಈಗಾಗಲೇ ಹರಸಾಹಸಪಡುತ್ತಿರುವ ಕ್ಯಾಲಿಫೋರ್ನಿಯಾದ ಅಗ್ನಿಶಾಮಕ ದಳದವರು, ಬೆಂಕಿ ಸುಂಟರಗಾಳಿಗಳನ್ನು ಎದುರಿಸಬೇಕಾದ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
'ಭಾರಿ ಗಾಳಿ ಮತ್ತು ತೀವ್ರ ಒಣಹವೆ ಏಕಕಾಲದಲ್ಲಿರುವುದರಿಂದ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಯಾವುದೇ ಭಾಗದಲ್ಲಿ ಹೊಸದಾಗಿ ಬೆಂಕಿ ಸ್ಫೋಟಿಸಬಹುದು. ಇನ್ನಷ್ಟು ಆತಂಕಕಾರಿ ಪರಿಸ್ಥಿತಿಗಳನ್ನು ತಂದೊಡ್ಡಬಹುದು' ಎಂದು ಹವಾಮಾನ ತಜ್ಞ ಟಾಡ್ ಹಾಲ್ ಅವರು ಎಚ್ಚರಿಸಿದ್ದಾರೆ. ಆದರೆ, ಅವರು ಬುಧವಾರ ಯಾವ ರೀತಿಯ ಬೆಂಕಿ ಸುಂಟರಗಾಳಿ ಉದ್ಭವಿಸಲಿದೆ ಎಂದು ಮಾಹಿತಿ ನೀಡಲಿಲ್ಲ.