ಕೊಲಂಬೊ (PTI): ಶ್ರೀಲಂಕಾದ ಪೊಲೀಸರ ಬಳಕೆಗೆ ವಾಹನ ಪೂರೈಸಲು ಕೇಂದ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ಹೈಕಮಿಷನ್ ಬುಧವಾರ ತಿಳಿಸಿದೆ.
ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಪೊಲೀಸ್ ಠಾಣೆಗಳಿಗೆ ಕನಿಷ್ಠ 80 ಜೀಪ್‌ಗಳು ಹಾಗೂ ಬಿಡಿಭಾಗಗಳನ್ನು ಪೂರೈಕೆ ಮಾಡಲಾಗುತ್ತದೆ.ಇದು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಪೊಲೀಸರಿಗೆ ನೆರವಾಗಲಿದೆ ಎಂದು ಹೇಳಿದೆ.
ಈ ಯೋಜನೆಗೆ 30 ಕೋಟಿ ಶ್ರೀಲಂಕಾದ ರೂಪಾಯಿಯಷ್ಟು ವೆಚ್ಚವಾಗಲಿದೆ ಎಂದು ತಿಳಿಸಿದೆ.