ಪ್ರಯಾಗರಾಜ್: ನಟಿ ನಿಖಿಲಾ ವಿಮಲ್ ಅವರ ಸಹೋದರಿ ಅಖಿಲಾ ವಿಮಲ್ ಸನ್ಯಾಸ ಸ್ವೀಕರಿಸಿರುವರು. ಪ್ರಯಾಗ್‍ರಾಜ್‍ನಲ್ಲಿ ನಡೆದ ಕುಂಭಮೇಳದಲ್ಲಿ ಅಖಿಲ್ ಸನ್ಯಾಸ ದೀಕ್ಷೆ ತೆಗೆದುಕೊಂಡರು. ಇನ್ನು ಮುಂದೆ ಅವರು ಅವಂತಿಕಾ ಭಾರತಿ ಎಂದು ಕರೆಯಲ್ಪಡುತ್ತಾರೆ.
ಅಖಿಲಾಳ ಗುರು ಅಭಿನವ ಬಾಲಾನಂದ ಭೈರವ ಅವರು ಫೇಸ್‍ಬುಕ್‍ನಲ್ಲಿ ಇದನ್ನು ಘೋಷಿಸಿದ್ದಾರೆ. ಅಭಿನವ ಬಾಲಾನಂದ ಭೈರವ ಪೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದಿದ್ದಾರೆ, "ಹಳೆಯ ಪೀಠಾಧೀಶ್ವರ ಆಚಾರ್ಯ ಮಹಾ ಮಂಡಲೇಶ್ವರ ಸ್ವಾಮಿ ಅವದೇಶಾನಂದ ಗಿರಿ ಮಹಾರಾಜರಿಂದ, ತಾನು ತಮ್ಮ ಶಿಷ್ಯ ಅಖಿಲ, ಅವಂತಿಕಾ ಭಾರತಿ ಎಂಬ ಹೆಸರನ್ನು ನೀಡಿರುವುದಾಗಿ” ಬರೆದಿರುವರು.
ಅಭಿನವ ಬಾಲಾನಂದ ಭೈರವ ಅವರು ಕೇರಳದ ಮಹಾಮಂಡಲೇಶ್ವರ ಸ್ಥಾನಮಾನ ಪಡೆದ ಸ್ವಾಮಿ ಆನಂದವನಂ ಭಾರತಿ ಅವರೊಂದಿಗಿನ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಅಖಿಲಾ ಕಣ್ಣೂರಿನ ತಳಿಪರಂಬದವಳು. ಅವರು ಕಲಾಮಂಡಲಂ ವಿಮಲಾದೇವಿ ಮತ್ತು ಎಂ.ಆರ್. ಪವಿತ್ರನ್ ಅವರ ಪುತ್ರಿ. ನಿಖಿಲಾ ಮತ್ತು ಅಖಿಲಾ ತಮ್ಮ ತಾಯಿಯ ಹೆಜ್ಜೆಗಳನ್ನು ಅನುಸರಿಸಿ ನೃತ್ಯ ಕ್ಷೇತ್ರದಲ್ಲಿದ್ದರು.