ತಿರುವನಂತಪುರಂ: ಮಕರಜ್ಯೋತಿ ಕಾಲಾವಧಿಯಲ್ಲಿ ಅಯ್ಯಪ್ಪ ಭಕ್ತಾದಿಗಳ ಸೌಕರ್ಯಕ್ಕಾಗಿ ಕೆಎಸ್ಸಾರ್ಟಿಸಿ 800 ಬಸ್‍ಗಳ ವ್ಯವಸ್ಥೆ ಮಾಡಿದೆ. ಈ ಪೈಕಿ 450 ಬಸ್‍ಗಳನ್ನು ಸರಣಿ ಸೇವೆಗೆ ಮತ್ತು 350 ಬಸ್‍ಗಳನ್ನು ದೂರದ ಸೇವೆಗೆ ಬಳಸಲಾಗುವುದು. ನೀಲಕ್ಕಲ್‍ನಿಂದ ಪಂಪಾ ನಿಲ್ದಾಣಗಳನ್ನು ತಲುಪಲಿವೆ ಎಂದು ಕೆಎಸ್ಸಾರ್ಟಿಸಿ ಪಂಪಾ ವಿಶೇಷಾಧಿಕಾರಿ ಶಾಜು ಲಾರೆನ್ಸ್ ಮಾಹಿತಿ ನೀಡಿದ್ದಾರೆ.
ಅಯ್ಯಪ್ಪ ಭಕ್ತರ ಸಂಖ್ಯೆ ಹೆಚ್ಚಿದ್ದರೆ ಪತ್ತನಂತಿಟ್ಟ ಮತ್ತು ಎರುಮೇಲಿ ನಿಲ್ದಾಣಗಳಿಂದಲೂ ಬಸ್‍ಗಳನ್ನು ತಲುಪಿಸಲಾಗುವುದು. ಮಕರಜ್ಯೋತಿ ಮಹೋತ್ಸವ ಮುಗಿಯುವವರೆಗೆ ಅಯ್ಯಪ್ಪ ಭಕ್ತಾದಿಗಳ ಆಗಮನಕ್ಕೆ ಅನುಗುಣವಾಗಿ ಲಿಂಕ್ ಸೇವೆಗಳು ನಡೆಯಲಿವೆ. ಜನವರಿ 7 ರವರೆಗೆ, ಶಬರಿಮಲೆಗೆ ವಿವಿಧ ಮಾರ್ಗಗಳಿಂದ ಕೆಎಸ್ಸಾರ್ಟಿಸಿ ಮತ್ತು ಕೆಯುಆರ್‍ಟಿಸಿ ಬಸ್‍ಗಳು 5150442 ಟ್ರಿಪ್ ನಡೆಸಿದೆ.
ಕಳೆದ ವರ್ಷಕ್ಕಿಂತ ಹೆಚ್ಚಿನ ಸೇವೆಗಳು ದೀರ್ಘ ದೂರ ಸರ್ವೀಸ್‍ಗಳನ್ನು ನೀಲಕ್ಕಲ್ ನಿಲ್ದಾಣಗಳಿಂದ ಕಾರ್ಯನಿರ್ವಹಿಸಲಾಗುವುದು. ನೀಲಕ್ಕಲ್ ಬೇಸ್ ಸ್ಟೇಷನ್ ತಲುಪುವವರ ಅಗತ್ಯಗಳಿಗೆ ಹೊಂದಿಕೊಂಡು ಈ ಸಏವೆ ನೀಡಲಾಗುವುದು. ಮಕರಜ್ಯೋತಿದರ್ಶನ ನಡೆಸಿದ ನಂತರ ನೀಲಕ್ಕಲ್ ಆಗಮಿಸುವ ಅಯ್ಯಪ್ಪ ಭಕ್ತರನ್ನು ಸಾಗಿಸಲು ಕಳೆದ ವರ್ಷಕ್ಕಿಂತ ಹೆಚ್ಚಿನ ಉಚಿತ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು ಎಂದೂ ಶಾಜು ಲಾರೆನ್ಸ್ ತಿಳಿಸಿದ್ದಾರೆ.