ಮುಳ್ಳೇರಿಯ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಕಾಸರಗೋಡು ನಗರ ಇವರ ನೇತೃತ್ವದಲ್ಲಿ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣದ ಉದ್ಘಾಟನೆ ಇತ್ತೀಚೆಗೆ ಜರಗಿತು. ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೇತ್ರಾವತಿ ವಲಯ ಸಂಯೋಜಕ ಜಯರಾಮ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ, ಧಾರ್ಮಿಕ ಮುಂದಾಳು ಅಗಲ್ಪಾಡಿ ಹೈಯರ್ ಸೆಕೆಂಡರಿ ಶಾಲಾ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಗಣೇಶ ಮಂದಿರ ಶಾಖೆಯ ಭಜನಾ ಪ್ರಮುಖ ಉದನೇಶ್ವರ ಉಪಸ್ಥಿತರಿದ್ದರು. ಮಾವಿನಕಟ್ಟೆ ಪರಿವಾರ ಸಮೇತ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಉಪಸ್ಥಿತರಿದ್ದರು. ಕಾಸರಗೋಡು ನಗರ ಶಾಖ ವಿಸ್ತರಣಾ ಪ್ರಮುಖ ಕುಮಾರ ಸುಬ್ರಮಣ್ಯ ಉಪಸ್ಥಿತರಿದ್ದರು. ನಗರ ಹಾಗೂ ಪ್ರಾಂತ ಪ್ರಮುಖರು, ವಲಯ ಪ್ರಮುಖರು, ಯೋಗ ಬಂಧುಗಳು, ಯೋಗೇತರ ಬಂಧುಗಳು ಪಾಲ್ಗೊಂಡಿದ್ದರು.
ಮಾವಿನಕಟ್ಟೆಯಲ್ಲಿ ಉಚಿತ ಯೋಗ ಶಿಕ್ಷಣ ಉದ್ಘಾಟನೆ
0
ಜನವರಿ 09, 2025