ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಸಂಘಟನೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ , ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲಾ ಕನ್ನಡ ಪರ ಸಂಘಟನೆಗಳ ವಿಳಾಸದ ಡೈರೆಕ್ಟರಿಯ 2ನೇ ಪರಿಷ್ಕøತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.
ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500 ರಷ್ಟು ಕನ್ನಡ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ, ಸ್ವಯಂಸೇವಾ ಸಂಘ ಸಂಸ್ಥೆಗಳು,ಸುಮಾರು 800 ರಷ್ಟು ಭಜನಾ ಸಂಘ, ಭಜನಾ ಮಂಡಳಿ, ಭಜನಾ ಮಂದಿರಗಳು, ಕೇರಳ ಸರ್ಕಾರದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳು ಖಾಸಗಿ ಕನ್ನಡ ಶಾಲಾ ಕಾಲೇಜುಗಳ ಹೆಸರು, ಪೂರ್ಣ ವಿಳಾಸ, ಮೊಬೈಲ್ ವಾಟ್ಸಾಪ್ ಸಂಖ್ಯೆ, ಇ-ಮೇಲ್, ಸ್ಥಾಪನೆಯಾದ ವರ್ಷ, ನೋಂದಣಿ ಸಂಖ್ಯೆ ಇತರ ಚುಟುಕು ಮಾಹಿತಿಯೊಂದಿಗೆ ಸಂಕ್ಷಿಪ್ತ ವಿವರಗಳು ಮತ್ತು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಪದಾಧಿಕಾರಿಗಳ ಹೆಸರು, ಮನೆ ವಿಳಾಸಗಳನ್ನು ಲೆಟರ್ ಹೆಡ್ ನಲ್ಲಿ ಪ್ರತ್ಯೇಕವಾಗಿ ಬರೆದು 2025 ಫೆಬ್ರವರಿ 28 ರ ಮುಂಚಿತವಾಗಿ ಅಂಚೆ ಮೂಲಕ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕನ್ನಡಗ್ರಾಮ ರಸ್ತೆ ಕಾಸರಗೋಡು -671121, ಮೊಬೈಲ್ :-9448572016, 9901951965 ಎಂಬ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.