ಮಂಜೇಶ್ವರ: ಕೇರಳ ರಾಜ್ಯ ಭಾರತ್ ಸ್ಕೌಟು ಮತ್ತು ಗೈಡ್ ಜಿಲ್ಲಾ ಸಂಸ್ಥೆಯ ನೇತೃತ್ವದಲ್ಲಿ ಬಾಕ್ರಬೈಲ್ ಹಿರಿಯ ಪ್ರಾಥಮಿಕ ಶಾಲೆ ಪಾತೂರು ಇಲ್ಲಿ ಜರಗಿದ ಜಿಲ್ಲಾ ಮಟ್ಟದ ಕಬ್ ಬುಲ್ ಬುಲ್ ಉತ್ಸವ ಜನ ಮನ ಗೆದ್ದಿತು. ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ 200ಕ್ಕೂ ಹೆಚ್ಚು ಕಿರಿಯಪ್ರಾಥಮಿಕ ಶಾಲೆಯ ಮಕ್ಕಳ ಎರಡು ದಿನಗಳ ಶಿಬಿರ ಅದ್ದೂರಿಯಾಗಿ ಜರಗಿತು.
ಶಿಬಿರದ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಭಾರತಿ ಎಸ್ ನಿರ್ವಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವರ್ಕಾಡಿ ಗ್ರಾಮ ಪಂಚಾಯತಿನ ಸದಸ್ಯ ಅಬ್ದುಲ್ ಮಜೀದ್ ಬಿ ಎ ವಹಿಸಿದ್ದರು. ಕೇರಳ ರಾಜ್ಯ ಭಾರತ್ ಸ್ಕೌಟು ಮತ್ತು ಗೈಡ್ ಜಿಲ್ಲಾ ಪ್ರಧಾನ ಆಯುಕ್ತ ಹಾಗು ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಸ್ಕೌಟು ಮತ್ತು ಗೈಡ್ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಚಯರ್ ಮೇನ್, ಮಂಜೇಶ್ವರ ಉಪಜಿಲ್ಲಾ ವಿದ್ಯಾದಿಕಾರಿ ರಾಜಗೋಪಾಲ್ ಬಾಕ್ರಬೈಲ್ ಶಾಲೆಯ ಮಾತೃಸಂಘದ ಆದ್ಯಕ್ಷೆ ನಳಿನಿ, ಗೈಡ್ ಜಿಲ್ಲಾ ಆಯುಕ್ತೆ ಶ್ರೀಕುಮಾರಿ, ಶುಭ ಹಾರೈಸಿದರು. ಬಾಕ್ರಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾರಾದ ಪಿ ಬಿ ಶ್ರೀನಿವಾಸ ರಾವ್ ಸ್ವಾಗತಿಸಿ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸುಕನ್ಯ ವಂದಿಸಿದರು.
ಶಿಬಿರದಲ್ಲಿ ಬುಲ್ ಬುಲ್ ಟ್ರೀ ಡೆಕೊರೇಶನ್, ಮಾಸ್ಕ್ ಮೇಕಿಂಗ್, ದೇಶಭಕ್ತಿಗೀತೆ, ಅಭಿನಯ ಗೀತೆ, ರಸಪ್ರಶ್ನೆ, ಚಿತ್ರರಚನೆ, ಸಮೂಹ ನೃತ್ಯ ಸ್ಪರ್ಧೆಗಳು ಜರಗಿದವು. ಸಂಜೆ ಪ್ರಕೃತಿ ನಡೆತವು ಮಕ್ಕಳಿಗೆ ಮುದನೀಡಿತು. ವಿಶೇಷವಾಗಿ ಸಿದ್ದಪಡಿಸಿದ ಫನ್ ಗೇಮ್ ಮಕ್ಕಳಿಗೆ ಮನರಂಜನೆಯಾಯಿತು. ಕಬ್ ವಿಭಾಗದ ಜಿಲ್ಲಾ ಆಯುಕ್ತ ಭುವನೇಂದ್ರ ನಾಯರ್, ಬುಲ್ ಬುಲ್ ವಿಭಾಗದ ಜಿಲ್ಲಾ ಆಯುಕ್ತೆ ಜ್ಯೋತಿಲಕ್ಷ್ಮಿ ಶಿಒಬಿರದ ನೇತೃತ್ವವಹಿಸಿದರು, ಜಿಲ್ಲಾ ಕಾರ್ಯದರ್ಶಿ ಭಾರ್ಗವಿಕುಟ್ಟಿ, ಜತೆ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು, ಸ್ಕೌಟು ಸಂಘಟನಾ ಆಯುಕ್ತ ವಿಜಯಕುಮಾರ್, ಗೈಡ್ ಸ್ಕೌಟು ಸಂಘಟನಾ ಆಯುಕ್ತೆ ಪವಿತ್ರಾ ಹಾಗು ಬಾಕ್ರಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ನೌಕರವೃಂದ ಸಹಕರಿಸಿದರು.