ಕಾಸರಗೋಡು: ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ಹಾಗೂ ಕ್ರಿಯಾಶೀಲೆತೆಯೊಂದಿಗಿನ ಯೋಜನೆಗಳಿಂದ ಕಾಂಞಂಗಾಡಿನ ಮುಖಚ್ಛಾಯೆ ಬದಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಬೆಂಬಲವೂ ಅನಿವಾರ್ಯ ಎಂಬುದಾಗಿ ನವಕೇರಳ ಮಿಷನ್ ರಾಜ್ಯ ಸಂಯೋಜಕಿ ಡಾ. ಟಿ.ಎನ್. ಸೀಮಾ ಹೇಳಿದರು.
ಅವರು ಕೇರಳದ ಹೊಸ ಕ್ರಿಯಾ ಯೋಜನೆಯ ಭಾಗವಾಗಿ, ಜಲಮೂಲಗಳ ಶುಚೀಕರಣದ 'ಇನ್ನು ನಾನು ಮುಂದಕ್ಕೆ ಹರಿಯಲೇ' ಯೋಜನೆಯ ಮೂರನೇ ಹಂತದ ಅಭಿಯಾನದಮ್ವಯ ಅತಿಯಾಂಬೂರ್-ಕಾಲಿಕಡವು ತೋಡಿನ ಶುಚೀಕರಣ ಕಾರ್ಯ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ನಗರಸಬ ವ್ಯಾಪ್ತಿಯ ಕಾಲುವೆಗಳ ಪುನರುಜ್ಜೀವನಕ್ಕೂ ಚಆಲನೆ ನೀಡಿದರು. ನೀರು ಹರಿಯುವ ನಾಲೆಗಳನ್ನು ತ್ಯಾಜ್ಯರಹಿತವಾಘಿಸಲು ಕಸ ಮುಕ್ತ ನವಕೇರಳಂ ವಾರ್ಡ್ ಮಟ್ಟದ 'ಜನಕೀಯ ಸಮಿತಿ'ವತಿಯಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಯಿತು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಲತಾ ಮತ್ತು ಕೆ.ವಿ.ಪ್ರಭಾವತಿ ಉಪಸ್ಥಿತರಿದ್ದರು. ವಾರ್ಡ್ ಕೌನ್ಸಿಲರ್ ಟಿ.ವಿ.ಸುಜಿತ್ ಕುಮಾರ್ ಸ್ವಾಗತಿಸಿದರು. ಕೌನ್ಸಿಲರ್ ಫೌಜಿಯಾ ಷರೀಫ್ ವಂದಿಸಿದರು.