ಬದಿಯಡ್ಕ: ಅಂಗಡಿ ವಠಾರದಲ್ಲಿ ಲಭಿಸದೆ ಅಬೋಧಾವಸ್ಥೆಯಲ್ಲಿ ಕಂಡು ಬಂದ ವ್ಯಕ್ತಿ ಚಿಕಿತ್ಸೆ ಮೃತಪಟ್ಟ ಘಟನೆ ನೀರ್ಚಾಲಿನಲ್ಲಿ ನಡೆದಿದೆ. ಸುಳ್ಯ ಸೋಣಂಗೇೀರಿ ನಿವಾಸಿ, ಬಿರ್ಮಿನಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ರಾಜ(49) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 3ರ ವೇಳೆಗೆ ರಾಜ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಏಣಿಯರ್ಪು ಬಳಿಯ ಬಾಗಿಲು ಮುಚ್ಚಿದ್ದ ಅಂಗಡಿಯ ವರಾಂಡದಲ್ಲಿ ಮಲಗಿರುವುದನ್ನು ಕಂಡು ಸ್ಥಳೀಯರು ಬದಿಯಡ್ಕ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸಿರಲಿಲ್ಲ. ಬಳಿಕ ರಾತ್ರಿ 10ರ ವೇಳೆಗೆ ಸ್ಥಳೀಯರು ನೋಡಿದಾಗ ರಾಜ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ನಂತರ ಪೆÇಲೀಸರು ಆಗಮಿಸಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಲಭಿಸದಿರುವುದರಿಂದ ಸಾವು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.