ತಿರುವನಂತಪುರ: ಇಂದು ಬೆಳಗ್ಗೆ ಟರ್ಕಿ ವಿಮಾನ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ.
ವಿಮಾನ ಇಸ್ತಾಂಬುಲ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ತೆರಳುತ್ತಿತ್ತು. ಕೊಲಂಬೊದಲ್ಲಿ ಪ್ರತಿಕೂಲ ಹವಾಮಾನದ ಪರಿಣಾಮ ವಿಮಾನವನ್ನು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಈ ವಿಮಾನದಲ್ಲಿ 299 ಪ್ರಯಾಣಿಕರು, 10 ಸಿಬ್ಬಂದಿ ಇದ್ದರು. ವಿಮಾನವು ಬೆಳಿಗ್ಗೆ 6.51ಕ್ಕೆ ಇಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಟಿಐಎಲ್) ಅಧಿಕಾರಿಯೊಬ್ಬರು ಹೇಳಿದರು.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಹವಾಮಾನ ಸುಧಾರಿಸಿದ ನಂತರ ವಿಮಾನ ಕೊಲಂಬೊಗೆ ತೆರಳಲಿದೆ ಎಂದು ಅವರು ಹೇಳಿದರು.