ಸಮರಸ ಚಿತ್ರಸುದ್ದಿ: ಬದಿಯಡ್ಕ: ತಿರುವನಂತಪುರಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ಹುಡುಗರ ಭರತನಾಟ್ಯ ಸ್ಪರ್ಧೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಭರತ್ ಕೃಷ್ಣ ಕೆ ಎಸ್ 'ಎ 'ಗ್ರೇಡ್ ಪಡೆದಿರುತ್ತಾನೆ. ಈತ ಮುಳ್ಳೇರಿಯಾದ ಸತ್ಯಶಂಕರ ಹಾಗೂ ಶ್ರೀಕಲಾ ದಂಪತಿಯ ಪುತ್ರ.