ಕುಂಬಳೆ: ಭಾರತ ಮಾತಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಆರ್ಟ್, ಆಲುವಾ, ಎರ್ನಾಕುಳಂನಲ್ಲಿ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಮೂಲತಃ ಕುಂಬಳೆ ಎಡನಾಡಿನ ಪರಿಣಿತ. ಬಿ ಅವರು ಮಂಗಳೂರುನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ವಿಭಾಗದ ಡಾ. ಎ. ಲೂರ್ದ್ ಸಾಮಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ದ ಕ್ರಿಟಿಕಲ್ ಸ್ಟಡಿ ಆಫ್ ದ ಎಮರ್ಜೆನ್ಸ್ ಆಫ್ ಪೀಮೇಲ್ ಐಡಿಂಟಿಟಿ ಇನ್ ಸೆಲೆಕ್ಟ್ ಕನ್ಟೆಂಪರರಿ ರಿಟೆಲ್ಲಿಂಗ್ಸ್ ಆಫ್ ದ ಮಹಾಭಾರತ' ಎಂಬ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾನಿಲಯವು ಆಂಗ್ಲಸಾಹಿತ್ಯದಲ್ಲಿ ಪಿಎಚ್ ಡಿ ಪ್ರದಾನ ಮಾಡಿದೆ.
ಪರಿಣಿತ ಬಿ.ಅವರು ಕನ್ನಡ-ಆಂಗ್ಲ ಸಾಹಿತಿಯಾಗಿದ್ದು, ಎರ್ನಾಕುಳಂನ ಕನ್ನಡ ಸಂಘದ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.