ಕಾಸರಗೋಡು: ವಿದ್ಯಾನಗರದ ಸರ್ಕಾರಿ ಕಾಲೇಜಿನ 1973ರ ಸಾಲಿನಲ್ಲಿ ಪದವಿ ಪೂರ್ತಿಗೊಳಿಸಿರುವ ವಿದ್ಯಾರ್ಥಿಗಳ ಸಂಗಮ ಭಾನುವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಈ ಬ್ಯಾಚಿನ ವಿದ್ಯಾರ್ಥಿಗಳ ಐದನೇ ವರ್ಷದ ಸಂಗಮ ಇದಾಗಿದ್ದು, ಸಂವಾದ, ಚರ್ಚೆ, ಹಾಡು, ನೃತ್ಯ, ಕವನವಾಚನದೊಂದಿಗೆ ಸಂಭ್ರಮಿಸಲಾಯಿತು.
ಇದು ಐದು ವರ್ಷಗಳ ಹಿಂದೆ ವಾಟ್ಸಾಪ್ ಗುಂಪಿನ ಮೂಲಕ ಪ್ರಾರಂಭವಾದ ಸಂಘಟನೆ 99 ಜನರ ಗುಂಪನ್ನು ಹೊಂದಿದೆ. ಸಭೆಯಲ್ಲಿ ಎ. ಕರುಣಾಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರಘುನಾಥ್. ಸಿ. ಸಿ, ಅರವಿಂದನ್ ಎನ್. ವಿ, ಮೋಹನನ್ ನಾಯರ್ ಕೆ, ವಿಜಯನ್.ಕೆ, ಮೋಹನನ್ ನಂಬಿಯಾರ್. ಕೆ. ಎನ್, ಎಸ್. ಕೆ. ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಎಲ್ಲರೂ 70 ವರ್ಷ ದಾಟಿದವರಾಗಿದ್ದು, 50ವರ್ಷದ ಹಿಂದಿನ ತಮ್ಮ ಕಾಲೇಜು ಜೀವನವನ್ನು ಪರಸ್ಪರ ಮೆಲುಕು ಹಾಕಿದರು. ತಮ್ಮ ವಯಸ್ಸನ್ನು ಮರೆತು ಕುಣಿತ, ಗಾಯನ, ಕವನ ವಾಚನದೊಂದಿಗೆ ಹಳೇ ಅನುಭವಗಳನ್ನು ಹಂಚಿಕೊಂಡರು.