ಶಬರಿಮಲೆ: ಈ ಬಾರಿಯ ಮಂಡಲ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಮಕರಸಂಕ್ರಮಣ ಮಹೋತ್ಸವಕ್ಕಾಗಿ ಸಿದ್ಧತೆ ಆರಂಭವಾಗಿದೆ ಎಂದು ಶಬರಿಮಲೆ ಮೇಲ್ಶಾಂತಿ ಎಸ್. ಅರುಣಕುಮಾರ ನಂಬೂದಿರಿ ತಿಳಿಸಿದರು.
ಉತ್ತರಾಯಣ ಕಾಲದ ನಂತರ ದಕ್ಷಿಣಾಯನ ಕಾಲ ಪ್ರಾರಂಭವಾಗುತ್ತಿದ್ದು, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಾಗುತ್ತಿರುವ ಈ ಸಮಯದಲ್ಲಿ ಶಬರಿಮಲೆಯಲ್ಲಿ ಮಕರಸಂಕ್ರಮಣ ಮಹೋತ್ಸವ ಭಕ್ತಿ ಸಂಭ್ರಮದಿಂದ ನೆರವೇರಲಿದೆ. ಪಂದಳಂ ಅರಮನೆಯಿಂದ ತರಲಾಗುವ ತಿರುವಾಭರಣಗಳನ್ನು ಪಾರಂಪರಿಕ ಕಾನನ ಹಾದಿ ಮೂಲಕ ಜ. 12ರಿಂದ ಆರಂಭಗೊಳ್ಳುವ ಭವ್ಯ ಘೋಷಯಾತ್ರೆ ಮೂಲಕ ಸನ್ನಿದಾನಕ್ಕೆ ತಂದು ಜ. 14ರಂದು ಸಂಜೆ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನೆರವೇರಿಸಲಾಗುವುದು. ಇದರೊಂದಿಗೆ ಪೆÇನ್ನಂಬಲಮೇಡಿನಲ್ಲಿ ಮಕರಜ್ಯೋತಿ ಬೆಳಗಲಿದ್ದು, ಭಕ್ತರೆಲ್ಲರೂ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ಮುಖ್ಯ ಅರ್ಚಕರು ತಿಳಿಸಿದರು.
(ಶಬರಿಮಲೆಯಲ್ಲಿ ಸೋಮವಾರ ಕಂಡುಬಂದ ಭಕ್ತಾದಿಗಳ ದಟ್ಟಣೆ.)