ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಸೋನಾಮಾರ್ಗ್ ಸುರಂಗವನ್ನು ಇಂದು(ಸೋಮವಾರ) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಜೆಡ್ ಮೋಡ್ ಎಂದೂ ಕರೆಯಲ್ಪಡುವ ಈ ಸುರಂಗ 12 ಕಿ.ಮೀ. ಉದ್ದ ವಿದ್ದು, 2700 ಕೋಟಿ ರೂ.ವೆಚ್ಚದಲ್ಲಿ ಸಮುದ್ರ ಮಟ್ಟದಿಂದ 8650 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಶ್ರೀನಗರದಿಂದ ಸೋನಾ ಮಾರ್ಗ್ ಮೂಲಕ ಲೇಹ್‌ಗೆ ಸರ್ವ ಋತುಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಈ ಸುರಂಗ ನೆರವಾಗಲಿದೆ.