ಕಾಸರಗೋಡು: ರಾಜ್ಯ ಸಂಪನ್ಮೂಲ ಕೇಂದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಆರ್.ಸಿ ಸಮುದಾಯ ಕಾಲೇಜು ಜನವರಿ ಅಧಿವೇಶನದಲ್ಲಿ ನಡೆಸುವ ಸರ್ಟಿಫಿಕೇಟ್, ಡಿಪೆÇ್ಲಮಾ ಇನ್ ಕೌನ್ಸೆಲಿಂಗ್ ಸೈಕಾಲಜಿ ಪೆÇ್ರೀಗ್ರಾಮ್‍ಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜನವರಿ 31 ರವರೆಗೆ ವಿಸ್ತರಿಸಲಾಗಿದೆ.
ಸರ್ಟಿಫಿಕೇಟ್ ಕೋರ್ಸ್‍ನ ಕಾಲಾವಧಿಯು ಆರು ತಿಂಗಳು ಆಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಗರಿಷ್ಠ ವಯೋಮಿತಿ ಇಲ್ಲ. ಶನಿವಾರ ಮತ್ತು ಭಾನುವಾರ ಸಾರ್ವಜನಿಕ ರಜಾದಿನಗಳಲ್ಲಿ ಸಂಪರ್ಕ ತರಗತಿಗಳನ್ನು ಆಯೋಜಿಸಲಾಗುತ್ತದೆ.. https://app.srccc.in/register ಎಂಬ ಲಿಂಕ್ ನ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ https://app.srccc.in/register ಎಂಬ ವೆಬ್‍ಸೈಟ್‍ನಲ್ಲಿ ಹೆಚ್ವಿನ ಮಾಹಿತಿ ಲಭ್ಯವಿರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್(9495654737, 8129119129)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.