ಕಣ್ಣೂರು: ಮಾಲೂರಿನ ಪೂವನ್‌ಪೊಯಿಲ್‌ನಲ್ಲಿ ಸ್ಫೋಟಕವೊಂದು ಸ್ಫೋಟಗೊಂಡು ಇಬ್ಬರು ಉದ್ಯೊಗ ಖಾತರಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳು ವಿಜಯಲಕ್ಷ್ಮಿ ಮತ್ತು ಪ್ರೀತಾ ಅವರನ್ನು ತಲಶ್ಯೇರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಂಚಿನ ಬಾಳೆ ತೋಟವನ್ನು ತೆರವುಗೊಳಿಸುವ ವೇಳೆ ಸ್ಫೋಟಕ ಸಾಧನ ಸ್ಫೋಟಗೊಂಡಿದೆ. ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು, ಇದೊಂದು ಹಳೆಯ ಸ್ಫೋಟಕ ಎಂದು ವರದಿಯಾಗಿದೆ.
ಕಣ್ಣೂರಿನ ಖಾಲಿ ಮೈದಾನದಲ್ಲಿ ಈ ಹಿಂದೆಯೂ ಸ್ಫೋಟಕ ಸ್ಫೋಟಗೊಂಡ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಕಟ್ಟುನಿಟ್ಟಿನ ತನಿಖೆ ನಡೆಸುತ್ತಿದ್ದಾರೆ.
ಕಣ್ಣೂರಿನಲ್ಲಿ ಸ್ಫೋಟಕ ಸ್ಫೋಟ, ಇಬ್ಬರು ಉದ್ಯೋಗ ಖಾತ್ರಿ ನೌಕರರಿಗೆ ಗಾಯ
0
ಜನವರಿ 01, 2025
Tags