HEALTH TIPS

ಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು

Top Post Ad

Click to join Samarasasudhi Official Whatsapp Group

Qries

ಹಾಂಗ್‌ಕಾಂಗ್: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ತುಸು ಏರಿಕೆಯಾಗಿದ್ದು, ಈ ಅಂತರವು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಅಂಕಿ-ಅಂಶಗಳ ಮಂಡಳಿಯ (ಎನ್‌ಬಿಎಸ್‌) ಮಾಹಿತಿ ಪ್ರಕಾರ, 2023ರಲ್ಲಿ 140.9 ಕೋಟಿಯಷ್ಟಿದ್ದ ಜನಸಂಖ್ಯೆಯಲ್ಲಿ 13 ಲಕ್ಷದಷ್ಟು ಇಳಿಕೆಯಾಗಿದೆ.

2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಸುಪಾಸಿನಲ್ಲಿದೆ. ಜನಸಂಖ್ಯೆಯು 2021 ಹಾಗೂ 2022ರ ಅವಧಿಯಲ್ಲಿ 20.80 ಲಕ್ಷದಷ್ಟು ಕಡಿಮೆಯಾಗಿತ್ತು.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದಲ್ಲಿ, ವಯಸ್ಸಾದವರ ಸಂಖ್ಯೆ ಏರಿಕೆಯಾಗಿ, ಕೆಲಸ ಮಾಡುವ ಜನರ ಸಂಖ್ಯೆ ಕುಸಿಯಲಿದೆ. ಗ್ರಾಹಕರ ಕೊರತೆಯೂ ಉಂಟಾಗಬಹುದು ಎಂಬ ಕಳವಳವನ್ನು ಈ ಮಾಹಿತಿ ಇನ್ನಷ್ಟು ಬಲಪಡಿಸಿದೆ.

ವೃದ್ಧರ ಆರೈಕೆ ಹಾಗೂ ನಿವೃತ್ತಿ ನಂತರದ ಸೌಕರ್ಯಗಳಿಗಾಗಿ ಹೆಚ್ಚುತ್ತಿರುವ ವೆಚ್ಚಗಳು, ಈಗಾಗಲೇ ಒತ್ತಡದಲ್ಲಿರುವ ಸ್ಥಳೀಯ ಸರ್ಕಾರಗಳಿಗೆ ಹೆಚ್ಚುವರಿ ಹೊರೆಯಾಗುವ ಸಾಧ್ಯತೆಯಿದೆ.

1980ರಿಂದ 2015ರ ವರೆಗೆ ಜಾರಿಯಲ್ಲಿದ್ದ 'ಒಂದೇ ಮಗು ನೀತಿ' ಹಾಗೂ ನಗರೀಕರಣದ ಪರಿಣಾಮವಾಗಿ ಚೀನಾದಲ್ಲಿ ದಶಕಗಳಿಂದಲೂ ಜನನ ದರವು ಕುಸಿತದ ಹಾದಿ ಹಿಡಿದಿದೆ.

ನೆರೆಯ ಜಪಾನ್ ಹಾಗೂ ದಕ್ಷಿಣ ಕೊರಿಯಾದಂತೆಯೇ, ಹೆಚ್ಚಿನ ಸಂಖ್ಯೆಯ ಕಾರಣದಿಂದಾಗಿ ಚೀನಾದ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೊರಟಿದ್ದಾರೆ. ಅಲ್ಲಿ ಮಕ್ಕಳನ್ನು ಸಾಕುವುದು ದುಬಾರಿ ವಿಚಾರ!. ಯುವ ಜನರು ಉನ್ನತ ಶಿಕ್ಷಣ ಹಾಗೂ ವೃತ್ತಿ ಜೀವನದ ಸಲುವಾಗಿ ಮದುವೆಯನ್ನು ಮುಂದೂಡುತ್ತಿದ್ದಾರೆ. ಜೀವನೋಪಾಯದ ವೆಚ್ಚಗಳೂ ಏರಿಕೆಯಾಗುತ್ತಿರುವುದರಿಂದ, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ತಡೆಯೊಡ್ಡುತ್ತಿದ್ದಾರೆ. ಜನನ ದರ ಕುಸಿಯಲು ಇವು ಪ್ರಮುಖ ಕಾರಣಗಳಾಗಿವೆ.

2023ರಲ್ಲಿ ವಿವಾಹ ಪ್ರಮಾಣದಲ್ಲಿ ಶೇ 12.4ರಷ್ಟು ಏರಿಕೆ ಕಂಡುಬಂದಿದೆ. ಹೆಚ್ಚಿನ ಮದುವೆಗಳು ಕೋವಿಡ್‌-19 ಸಾಂಕ್ರಾಮಿಕ ಕಾರಣದಿಂದ ವಿಳಂಬವಾಗಿದ್ದವು. ಅದೇ ಕಾರಣಕ್ಕೆ 2024ರಲ್ಲಿ ಜನನ ಸಂಖ್ಯೆಯಲ್ಲಿ ತಾತ್ಕಾಲಿಕ ಚೇತರಿಕೆ ಕಂಡುಬಂದಿದೆ. ಆದರೆ, 2025ರಲ್ಲಿ ಮತ್ತೆ ಕುಸಿಯುವ ನಿರೀಕ್ಷೆ ಇದೆ ಎಂದು ಜನಸಂಖ್ಯಾ ಶಾಸ್ತ್ರಜ್ಞರು ಹೇಳಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries