ಕೊಚ್ಚಿ: ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ನಾಲ್ವರು ಸಿಪಿಎಂ ಮುಖಂಡರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಮಾಜಿ ಶಾಸಕÀ ಕೆ.ವಿ.ಕುಂಞÂ್ಞ ರಾಮನ್, ಮಣಿಕಂಠನ್, ಭಾಸ್ಕರನ್ ಮತ್ತು ರಾಘವನ್ ಅವರು ಹೈಕೋರ್ಟ್‍ನಲ್ಲಿ ನಿನ್ನೆ ಮೇಲ್ಮನವಿ ಸಲ್ಲಿಸಿದರು.
ಈ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಈ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಪರಾಧ ಎಸಗಿದ ಆರೋಪಿಗಳನ್ನು ಪೋಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಿರುವುದು ಅವರ ಮೇಲಿನ ಪ್ರಕರಣವಾಗಿದೆ. ಐದು ವರ್ಷಗಳ ಶಿಕ್ಷೆಯ ನಂತರ, ಅವರ ಜಾಮೀನು ರದ್ದುಗೊಳಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ.