ಬದಿಯಡ್ಕ: ಕನ್ನೆಪ್ಪಾಡಿ ಜನಸೇವಾ ವಿಶ್ವಸ್ಥ ನಿಧಿ ಟ್ರಸ್ಟ್ ಸಮಿತಿಯವರ ಬೇಡಿಕೆಗೆ ಸ್ಪಂದಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರೂ ಒಂದು ಲಕ್ಷ ಮೊತ್ತದ ಸಹಾಯಧನವನ್ನು ಮಂಜೂರುಗೊಳಿಸಿದ್ದರು. ಮಂಜೂರಾತಿ ಪತ್ರವನ್ನು ಆಶ್ರಮದ ಕಾರ್ಯದರ್ಶಿ ರಮೇಶ್ ಕಳೇರಿ ಅವರಿಗೆ ಹಸ್ತಾಂತರಿಸಲಾಯಿತು.
ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಖಿಲೇಶ್ ನಗುಮುಗಂ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಮುಖೇಶ್, ಬದಿಯಡ್ಕ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.