ಕೊಚ್ಚಿ: ಕೈಗಾರಿಕೋದ್ಯಮಿ ಬಾಬಿ ಚೆಮ್ಮನ್ನೂರ್ ತನ್ನನ್ನು ದ್ವಂದ್ವಾರ್ಥ ಭಾಷೆ ಬಳಸಿ ನಿಂದಿಸಿದ್ದಾರೆ ಎಂಬ ದೂರಿನ ಕುರಿತು ನಟಿ ಹನಿ ರೋಸ್ ನ್ಯಾಯಾಲಯದಲ್ಲಿ ಗೌಪ್ಯ ಹೇಳಿಕೆ ನೀಡಿದ್ದಾರೆ.
ಎರ್ನಾಕುಳಂ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಟಿ ತನ್ನ ಹೇಳಿಕೆಯನ್ನು ನಿನ್ನೆ ನೀಡಿದ್ದಾರೆ.
ಏತನ್ಮಧ್ಯೆ, ಪ್ರಕರಣದಲ್ಲಿ ವಯನಾಡ್‍ನಿಂದ ಬಂಧನಕ್ಕೊಳಗಾದ ಬಾಬಿ ಚೆಮ್ಮನ್ನೂರ್‍ನನ್ನು ವಯನಾಡಿನ ರೆಸಾರ್ಟ್‍ನಿಂದ ಕೊಚ್ಚಿಗೆ ಕರೆತರಲಾಯಿತು.
ಮಂಗಳವಾರ ಹನಿ ರೋಸ್ ನೇರವಾಗಿ ಎರ್ನಾಕುಳಂ ಸೆಂಟ್ರಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 75(4) ಅಡಿಯಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಶ್ಲೀಲ ಟೀಕೆಗಳನ್ನು ಮಾಡಿರುವುದರ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.