HEALTH TIPS

ಸುನಂದಾ ಬೆಳಗಾಂವಕರ್ ಅವರ ಕೃತಿಗಳಲ್ಲಿ ಧಾರವಾಡ ಜೀವಂತವಾಗಿದೆ: ಡಾ. ಸುಭಾಷ್ ಪಟ್ಟಾಜೆಯವರ ಕೃತಿ ಬಿಡುಗಡೆಗೊಳಿಸಿ ಪ್ರೊ. ರಾಘವೇಂದ್ರ ಪಾಟೀಲ ಅಭಿಮತ

ಧಾರವಾಡ: ಸುನಂದಾ ಬೆಳಗಾಂವರರ ಕೃತಿಗಳಲ್ಲಿ ಧಾರವಾಡದ ಮಣ್ಣಿನ ಗಂಧವಿದೆ. ಅವರ ಬರಹಗಳನ್ನು ಪರಿಸರ ವಿಮರ್ಶೆಯ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಅವಕಾಶವಿದೆ. ಅವರು ತಮ್ಮ ಬರಹಗಳಲ್ಲಿ ಆಧುನಿಕ ಜಗತ್ತಿನ ಸೂಕ್ಷ್ಮ ವಿಚಾರಗಳನ್ನು ಮಂಡಿಸಿದ್ದಾರೆ ಎಂದು ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಹೇಳಿದರು.

ಕಾಸರಗೋಡಿನ ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರು ಬರೆದ 'ಸುನಂದಾ ಬೆಳಗಾಂವಕರ ವ್ಯಕ್ತಿತ್ವ ಸಾಹಿತ್ಯ' ಎಂಬ ಪುಸ್ತಕವನ್ನು  ಧಾರವಾಡ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಯೋಜನೆಯ ಅಂಗವಾಗಿ ಮೂಡಿ ಬಂದಿರುವ ಈ ಕೃತಿಯು ಸುನಂದಾ ಬೆಳಗಾಂವಕರರ ಕುರಿತು ಪ್ರಕಟವಾದ ಮೊದಲ ಪುಸ್ತಕವಾಗಿದೆ. ಈ ಪುಸ್ತಕವನ್ನು ಬರೆಯುವಲ್ಲಿ ಪಟ್ಟಾಜೆಯವರು ತಲಸ್ಪರ್ಶಿ ಅಧ್ಯಯನವನ್ನು ಮಾಡಿದ್ದಾರೆ. ಮೂಲತಃ ಕಾಸರಗೋಡಿನವರಾಗಿದ್ದರೂ ಸುನಂದಾ ಅವರ ಬರಹಗಳಲ್ಲಿ ಕಂಡುಬರುವ ಧಾರವಾಡದ ಆಡುಮಾತಿನ ಲಯವನ್ನು ಗ್ರಹಿಸಿಕೊಂಡು ಆಳವಾಗಿ ವಿಶ್ಲೇಷಿಸಿದ್ದಾರೆ. ಮೌಲಿಕ ವಿಚಾರಗಳನ್ನು ಒಳಗೊಂಡಿರುವ ಈ ಪುಸ್ತಕವು ಸುನಂದಾ ಬೆಳಗಾಂವಕಾರರ ಸಮಗ್ರ ಕೃತಿಗಳನ್ನು ಓದಲು ಪ್ರೇರಣೆಯನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 


ಸುನಂದಾ ಬೆಳಗಾಂವಕರರ ಕೃತಿಗಳು ಕನ್ನಡ ಸಾಹಿತ್ಯ ಪರಂಪರೆಯ ಸತ್ವವನ್ನು ಹೀರಿಕೊಂಡು ರೂಪು ತಾಳಿವೆ. ಅವರು ಸಾಹಿತಿಯಾಗಿ ಎಷ್ಟು ದೊಡ್ಡವರೋ ವ್ಯಕ್ತಿಯಾಗಿಯೂ ಅμÉ್ಟೀ ದೊಡ್ಡವರು. ಕನ್ನಡ ಸಾಹಿತ್ಯದಲ್ಲಿ ಅವರಿಗೆ ಮಹತ್ವದ ಸ್ಥಾನವಿದೆ. ಈ ಸಂಗತಿಗಳನ್ನು ಈ ಪುಸ್ತಕದಲ್ಲಿ ಗುರುತಿಸಿ ಗೌರವಿಸುವ ನಮ್ರ ಪ್ರಯತ್ನವನ್ನು ಮಾಡಿದ್ದೇನೆ.  ಎಂದು ಕೃತಿಯ ಲೇಖಕ ಡಾ. ಸುಭಾμï ಪಟ್ಟಾಜೆಯವರು ಹೇಳಿದರು. ಯುವ ವಿಮರ್ಶಕ ವಿಕಾಸ ಹೊಸಮನಿಯವರು ಪುಸ್ತಕವನ್ನುಅವಲೋಕಿಸಿದರು. ಹಿರಿಯ ಲೇಖಕ ಶ್ರೀನಿವಾಸ ವಾಡಪ್ಪಿಯವರು ಸುನಂದಾ ಬೆಳಗಾಂವಕರರ ಜೊತೆಗಿನ ಒಡನಾಟಗಳನ್ನು ಸ್ಮರಿಸಿದರು. ಖ್ಯಾತ ಸಾಹಿತಿ ಮಾಲತಿ ಪಟ್ಟಣಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೈಜಯಂತಿ ಭಟ್, ಸೀಮಾ ಕುಲಕರ್ಣಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಭಾμï ಪಟ್ಟಾಜೆ ಮತ್ತು ವಿಕಾಸ ಹೊಸಮನಿಯವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿ ಸುಜಾತ ಹಡಗಲಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries