HEALTH TIPS

ಮೂರು ಜಿಲ್ಲಾ ವ್ಯಾಪ್ತಿಯ ಹರಿಕಥಾ ಸ್ಪರ್ಧೆ- ಕುಂಬಳೆಯ ಕೀರ್ತನಕುಟಿರಕ್ಕೆ ಸಮಗ್ರ ಪ್ರಶಸ್ತಿ

ಕುಂಬಳೆ: ಹರಿಕಥಾ ಪರಿಷತ್ ಮಂಗಳೂರು ಹಾಗೂ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ, ಇತ್ತೀಚೆಗೆ ಮಂಗಳೂರಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ, ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾಮಟ್ಟದ ವಿದ್ಯಾರ್ಥಿಗಳಿಗಾಗಿ ಹರಿಕಥಾ ಸ್ಪರ್ಧೆ-24 ಜರಗಿತು. ಕಿರಿಯ ವಿಭಾಗದಲ್ಲಿ ಐದರಿಂದ ಹತ್ತನೇ ತರಗತಿಯ ತನಕದ ಮಕ್ಕಳು ಹಾಗೂ ಹಿರಿಯ ವಿಭಾಗದಲ್ಲಿ ಪಿ.ಯು.ಸಿ.ಯಿಂದ ಪದವಿ ತನಕದ ಮಕ್ಕಳು ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 16  ಮಂದಿ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕಿರಿಯ ಹಾಗೂ ಹಿರಿಯ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಒಟ್ಟು ಆರೂ ಪ್ರಶಸ್ತಿಗಳನ್ನು ಕುಂಬಳೆಯ ಕಲಾರತ್ನ ಶಂನಾಡಿಗ ಕುಂಬ್ಳೆ ನಿರ್ದೇಶನದ ಕೀರ್ತನಕುಟೀರದ ಸ್ಪರ್ಧಾಳುಗಳು ಬಗಲಿಗೇರಿಸಿಕೊಂಡು ದಾಖಲೆ ನಿರ್ಮಿಸಿರುವರು.

ಕಿರಿಯ ವಿಭಾಗದಲ್ಲಿ ಕುಮಾರಿ ಪ್ರಣಮ್ಯ ಕೆ.ಎಸ್. ನಾಯ್ಕಾಪು (ಪ್ರಥಮ), ಕುಮಾರಿ ದೇವಿಕಾ ಕೆ, ಪುತ್ತೂರು (ದ್ವಿತೀಯ), ಹಾಗೂ ಮಾಸ್ಟರ್ ಸಾತ್ವಿಕ್ ಕೃಷ್ಣ ತುಂಗ, ಬಂದ್ಯೋಡು (ತೃತೀಯ) ಸ್ಥಾನವನ್ನೂ, ಹಿರಿಯ ವಿಭಾಗದಲ್ಲಿ ಕುಮಾರಿ ಪೂಜಾ ವಾಸುದೇವ ಐಲ (ಪ್ರಥಮ), ಕುಮಾರಿ ನಿಶ್ವಿತ ಕೃಷ್ಣ ಭಟ್ ಅಡೂರು (ದ್ವಿತೀಯ), ಹಾಗೂ ಕುಮಾರಿ ಅಭಿಜ್ಞಾ ಭಟ್ ಬೊಳುಂಬು (ತೃತೀಯ) ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಈ ಆರೂ ಜನ ವಿಜೇತರೂ ಕಲಾರತ್ನ ಶಂನಾಡಿಗ ಕುಂಬ್ಳೆ ಇವರ ಶಿಷ್ಯರಾಗಿದ್ದು, ಕುಂಬಳೆಯ ನಾಯ್ಕಾಪಿನಲ್ಲಿ ಕಾರ್ಯವೆಸಗುತ್ತಿರುವ ಹರಿಕಥಾ ಕಲೆಯ ತರಬೇತಿ ಸಂಸ್ಥೆ ಕೀರ್ತನಕುಟೀರದಲ್ಲಿ ನಿಯಮಿತ ರೀತಿಯಲ್ಲಿ ಹರಿಕಥೆಯನ್ನು ಕಲಿಯುತ್ತಿದ್ದಾರೆ.


ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ನಗದು ರೂ. 5000/- ಮತ್ತು ಪ್ರಮಾಣಪತ್ರ, ದ್ವಿತೀಯ ಬಹುಮಾನ ರೂ 3000/- ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ ಬಹುಮಾನ ರೂ 2000/- ನಗದು ಹಾಗೂ ಪ್ರಮಾಣಪತ್ರವನ್ನೊಳಗೊಂಡಿದ್ದರೆ, ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ನಗದು ರೂ. 7000/-  ಮತ್ತು ಪ್ರಮಾಣಪತ್ರ, ದ್ವಿತೀಯ ಬಹುಮಾನ ರೂ 5000/- ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ ಬಹುಮಾನ ರೂ 3000/- ನಗದು ಹಾಗೂ ಪ್ರಮಾಣಪತ್ರವನ್ನೊಳಗೊಂಡಿದೆ. ಈ ಎಲ್ಲಾ ನಗದು ಬಹುಮಾನಗಳನ್ನು ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಂಗಳೂರು ಇವರು ಪ್ರಾಯೋಜಿಸಿದ್ದಾರೆ. ಹರಿಕಥಾ ಕಲೆಯ ಬೆಳವಣಿಗೆಗಾಗಿಯೇ ಸ್ಥಾಪನೆಗೊಂಡು ತನ್ನ 15ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಹರಿಕಥಾ ಪರಿಷತ್ ಮಂಗಳೂರು ಈ ಸ್ಪರ್ಧೆಯನ್ನು ಕಳೆದ ವರ್ಷ ಪ್ರಾರಂಭಿಸಿದ್ದು, ಈ ರೀತಿಯ ಸ್ಪರ್ಧೆಯಿಂದ ಕಿರಿಯ ವಯಸ್ಸುಗಳಿಗೆ ಹರಿಕಥೆ ಕಲೆಯನ್ನು ಕಲಿಯುವ ಉತ್ತಮ ಮನಸ್ಸು ಮೂಡಿ ಬರಬೇಕೆಂಬುದು ತಮ್ಮ ಆಶಯವೆಂದೂ, ಈಗಾಗಲೇ ಅನೇಕ ಮಕ್ಕಳು ಹರಿಕಥೆಯನ್ನು ಕಲಿಯುವ ಕಡೆಗೆ ಮನ ಮಾಡಿರುವರೆಂದೂ ಇದು ಒಂದು ಉತ್ತಮ ಬೆಳವಣಿಗೆಯೆಂದೂ ಪರಿಷತ್ ಅಧ್ಯಕ್ಷÀ ಹರಿದಾಸ ದೇವಕೀತನಯ ಕೂಡ್ಲು ನುಡಿದರು. ಜನವರಿ 19ರಂದು ಮಂಗಳೂರಿನ ಮಂಗಳಾ ದೇವಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆಯಲಿರುವ ಹರಿಕಥಾ ಸಮ್ಮೇಳನದ ವೇಳೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯ ನಡೆಯುವುದೆಂಬು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹರಿದಾಸ ಪುಷ್ಕಳ ಕುಮಾರ್ ಅವರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries