ಅಡುಗೆ ಮನೆಯಲ್ಲಿ ತುಂಬಾ ಗಲೀಜಾಗುವ ವಸ್ತುಯೆಂದರೆ ಅದು ಗ್ಯಾಸ್ ಸ್ಟೌವ್,ಅದರಲ್ಲಿಯೂ ಕುಕ್ಕರ್‌ನಿಂದ ದ್ರವಾಂಶ ಸೋರುತ್ತಿದ್ದರಂತೂ ಗ್ಯಾಸ್ ಸ್ಟೌವ್ ಕತೆ ಹೇಳುವುದು ಬೇಡ, ಗ್ಯಾಸ್ ಸ್ಟೌವ್ ಪ್ರತಿಬಾರಿ ಅಡುಗೆ ಮಾಡಿದಾಗ ಶುಚಿ ಮಾಡಿಡುವುದು ಎಲ್ಲರಿಗೆ ಸಾಧ್ಯವಾಗಲ್ಲ.
ಸಮಯವಿಲ್ಲ, ಮತ್ತೆ ಮಾಡುವ ಅಥವಾ ಸಮಯ ಸಿಕ್ಕಾಗ ಮಾಡುವ ಅಂತ ಮೇಲೆ-ಮೇಲೆ ಒರೆಸಿ ಸುಮ್ಮನಾಗುತ್ತೇವೆ, ಹೀಗೆ ಮಾಡಿದಾಗ ಗ್ಯಾಸ್ ಸ್ಟೌವ್ ಕಪ್ಪಗಾಗುವುದು. ಈ ರೀತಿ ಕಪ್ಪಾದಾಗ ಕ್ಲೀನ್ ಮಾಡುವುದು ತುಂಬಾನೇ ಕಷ್ಟ, ಗಂಟೆಗಟ್ಟಲೆ ಶುಚಿ ಮಾಡಬೇಕಾಗುತ್ತದೆ,ಆದರೆ ಇಂಥ ಕಲೆಯನ್ನು ಕೆಲ ನಿಮಿಷಗಳಲ್ಲಿ ಶುಚಿ ಮಾಡಬಹುದು ಗೊತ್ತಾ ಇದರ ಬಗ್ಗೆ ನೋಡೋಣ ಬನ್ನಿ:
ಗ್ಯಾಸ್ ಸ್ಟೌವ್ ಕೆಲವೇ ನಿಮಿಷದಲ್ಲಿ ಕ್ಲೀನ್ ಮಾಡಲು ಟಿಪ್ಸ್ ಒಂದು ಬೌಲ್‌ಗೆ 2 ಚಮಚ ಸೋಪು ಪುಡಿ ಹಾಕಿ. ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಈಗ ಆ ಕಪ್ಪು ಕಲೆ ಮೇಲೆ ಈ ಸೋಪು ನೀರು ಹಾಕಿ, ನಂತರ 4-5 ನಿಮಿಷ ಬಿಡಿ. ನಂತರ ಸ್ಟೀಲ್ ಸ್ಕ್ರಬ್ಬರ್‌ನಿಂದ ತಿಕ್ಕಿದರೆ ಕಲೆ ಬೇಗನೆ ಹೋಗುತ್ತದೆ, ಸ್ಟೌವ್ ಕ್ಲೀನ್ ಆಗುತ್ತದೆ.
ಈರುಳ್ಳಿ ಹಾಕಿದ ನೀರು ನೀವು ಒಂದು ಈರುಳ್ಳಿಯನ್ನು ಒಂದು ಕಪ್ ನೀರು ಹಾಕಿ ಕುದಿಸಿ, ಆ ನೀರನ್ನು ಗ್ಯಾಸ್ ಸ್ಟೌವ್ ಮೇಲೆ ಹಾಕಿ ಸ್ವ್ಪ ಹೊತ್ತು ಬಿಟ್ಟು ಸೋಪು (ಡಿಟರ್ಜೆಂಟ್) ಸ್ಕ್ರಬ್ಬರ್‌ಗೆ ಹಚ್ಚಿ ತಿಕ್ಕಿದರೆ ಗ್ಯಾಸ್ ಸ್ಟೌವ್ ಫಳ ಫಳ ಹೊಳೆಯುತ್ತದೆ. ಬರ್ನರ್ ಹೇಗೆ ಸ್ವಚ್ಛಗೊಳಿಸಬಹುದು ನೀವು ಬರ್ನರ್‌ಗೆ ಸ್ವಲ್ಪ ವಿನೆಗರ್ ಹಾಕಿ ಸ್ವಲ್ಪ ಹೊತ್ತು ಬಿಡಿ, ನಂತರ ಟ್ಯಾಪ್ ಅಡಿಯಲ್ಲಿ ಹಿಡಿಯಿರಿ, ನಂತರ ಸೋಪ್ ಲಿಕ್ವಿಡ್ ಹಾಕಿ ತೊಳೆಯಿರಿ, ಈ ರೀತಿ ನೀವು ಎರಡು ಮೂರು ದಿನಕ್ಕೊಮ್ಮೆ ಮಾಡ್ತಾ ಇದ್ದಾರೆ ಬರ್ನರ್ ಕ್ಲೀನ್ ಆಗಿರುತ್ತದೆ.
ಬರ್ನರ್ ತುಂಬಾನೇ ಕೊಳೆಯಾಗಿದ್ದರೆ ಈ ರೀತಿ ಮಾಡಿ ನೀವು ಬಿಸಿನೀರಿಗೆ ಸ್ವಲ್ಪ ಡಿಟರ್ಜೆಂಟ್ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಬರ್ನರ್ ಸ್ವಲ್ಪ ಹೊತ್ತು ಹಾಕಿಡಿ ನಂತರ ತಿಕ್ಕಿ ತೊಳೆದರೆ ಸಾಕು ಬರ್ನರ್ ಕ್ಲೀನ್ ಆಗುತ್ತೆ. ಅಡುಗೆ ಸೋಡಾ, ನಿಂಬೆರಸ ಮತ್ತು ಸೋಪ್ ಲಿಕ್ವಿಡ್ ನೀವು ಒಂದು ಬೌಲ್‌ಗೆ 2 ಚಮಚ ಅಡುಗೆ ಸೋಡಾ ಹಾಕಿ ಅದಕ್ಕೆ ಸ್ವಲ್ಪ ಸೋಪ್ ಲಿಕ್ವಿಡ್ ಹಾಕಿ,ನಿಂಬೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ, ಈಗ ನಿಂಬೆಹಣ್ಣಿನ ಸಿಪ್ಪೆಯನ್ನು ಈ ಮುಶ್ರಣದಲ್ಲಿ ಅದ್ದಿ ಅದರಿಂ ಗ್ಯಾಸ್ ಸ್ಟೌವ್ ಮೇಲೆ ತಿಕ್ಕಿ 5-10 ನಿಮಿಷ ಬಿಡಿ, ನಂತರ ಸ್ಟೌವ್ ಅನ್ನು ಸ್ಕ್ರಬ್ಬರ್ ಹಾಕಿ ತೊಳೆದರೆ ಸಾಕು ಗ್ಯಾಸ್‌ಸ್ಟೌವ್ ಹೊಸದರಂತೆ ಕಾಣುವುದು.
ಬರ್ನರ್‌ನಲ್ಲಿ ಸೇರಿರುವ ಕೊಳೆ ತೆಗೆಯುವುದು ಹೇಗೆ? ನೀವು ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಬರ್ನರ್ ಹಾಕಿ, ಬಂತರ ಹಳೆಯ ಹಲ್ಲುಜ್ಜುವ ಬ್ರೆಷ್ ಬಳಸಿ ಸ್ವಚ್ಛಗೊಳಿಸಿ, ಹೀಗೆ ಮಾಡುವುದರಿಂದ ಬರ್ನರ್ ತುಂಬಾ ಸ್ವಚ್ಛವಾಗುವುದು. ಬರ್ನರ್‌ನಲ್ಲಿ ಕೊಳೆ ಅಥವಾ ಆಹಾರ ವಸ್ತುಗಳು ಸೇರಿದ್ದರೆ ಗ್ಯಾಸ್ ಕಡಿಮೆಯಾಗುವುದು, ಈ ರೀತಿ ಕ್ಲೀನ್ ಮಾಡಿದರೆ ಗ್ಯಾಸ್ ಉರಿ ಚೆನ್ನಾಗಿ ಬರುತ್ತದೆ.