ಕಾಸರಗೋಡು: ದೃಷ್ಟಿ ಸಾಂಸ್ಕøತಿಕ ವೇದಿಕೆಯ ಸ್ಥಾಪಕಾಧ್ಯಕ್ಷ ಹಾಗೂ ಖ್ಯಾತ ಪತ್ರಕರ್ತ ಕಳತ್ತಿಲ್ ರಾಮಕೃಷ್ಣ ಅವರ ಹೆಸರಲ್ಲಿ ಎರಡನೇ ಬಾರಿಗೆ ನೀಡಲಾಗುವ ಕಳತ್ತಿಲ್ ರಾಮಕೃಷ್ಣನ್ ಪ್ರಶಸ್ತಿಗೆ ಪತ್ರಕರ್ತ ಪಿ.ಪಿ.ಲಿಬೀಶ್ ಕುಮಾರ್ ಹಾಗೂ ಕಾಸರಗೋಡಿನ ಹಿರಿಯ ಪತ್ರಕರ್ತರಾಗಿದ್ದ ಉಣ್ಣಿಕೃಷ್ಣನ್ ಪುಷ್ಪಗಿರಿ ಅವರ ಹೆಸರಿನ ಮೊದಲ ವರ್ಷದ ಪ್ರಶಸ್ತಿಯನ್ನು ಪತ್ರಕರ್ತ ಟಿ.ಎ.ಶಾಫಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ದೃಷ್ಟಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಅಶ್ರಫ್ ಕೈಂದಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ತಮ್ಮ ವಿಶೇಷ ವರದಿಗಳಿಗಾಗಿ ಲಿಬೀಶ್ ಕುಮಾರ್ ಹಾಗೂ ಟಿ.ಎ ಶಾಫಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಹಿರಿಯ ಪತ್ರಕರ್ತರಾದ ಪಿ ಸಜಿತ್ ಕುಮಾರ್, ವಿನೋದ್ ಪಾಯಂ ಮತ್ತು ಹಿರಿಯ ಮಾಧ್ಯಮ ಪ್ರತಿನಿಧಿ ವಿ.ವಿ ಪ್ರಭಾಕರನ್ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. ನಗದು ಪುರಸ್ಕಾರ ಹಾಗೂ ಫಲಕದೊಂದಿಗೆ ಪ್ರಶಸ್ತಿಯನ್ನು ಜನವರಿ 16ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು. ಈ ಸಂದರ್ಭ ಹಿರಿಯ ಪತ್ರಕರ್ತರಾದ ದೇವದಾಸ್ ಪಾರೆಕಟ್ಟ, ಅಶೋಕನ್ ನೀರ್ಚಾಲ್ ಮತ್ತು ಅಶೋಕ ಕರಂದಕ್ಕಾಡ್ ಅವರನ್ನು ಸನ್ಮಾನಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶಾಫಿ ತೆರುವತ್, ಉಪಾಧ್ಯಕ್ಷ ಪದ್ಮೇಶ್ ಕೆ.ವಿ, ಎ.ಪಿ.ವಿನೋದ್ ಉಪಸ್ಥಿತರಿದ್ದರು.