ನವದೆಹಲಿ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರನ್ನು 'ಅವಮಾನಿಸಿದ' ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷವು, 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಅಭಿಯಾನವನ್ನು ಆರಂಭಿಸಿದೆ.
'ಈ ಅಭಿಯಾನದಲ್ಲಿ ಪಕ್ಷದ ನಾಯರು ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಬಿಜೆಪಿ-ಆರ್‌ಎಸ್‌ಎಸ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಹೇಗೆ ಅವಮಾನಿಸುತ್ತಿವೆ ಎಂದು ಜನರಿಗೆ ತಿಳಿಸಲಿದ್ದಾರೆ' ಎಂದು ಪಕ್ಷದ ನಾಯಕ ಪವನ್ ಖೇರಾ ತಿಳಿಸಿದರು.
'ಜನವರಿ 3ರಂದು ಅಭಿಯಾನ ಆರಂಭಿಸಿದ್ದೇವೆ. ಜನವರಿ 26ರಂದು ಅಂಬೇಡ್ಕರ್ ಜನ್ಮಸ್ಥಳ ಮಧ್ಯಪ್ರದೇಶದ ಮಹೂನಲ್ಲಿ ಬೃಹತ್ ರ‍್ಯಾಲಿ ಆಯೋಜಿಸಿ ಅಭಿಯಾನವನ್ನು ಸಮಾಪ್ತಿಗೊಳಿಸುತ್ತೇವೆ' ಎಂದರು.
'ಅಂಬೇಡ್ಕರ್ ಅವರು ಬಿತ್ತಿರುವ ಮೌಲ್ಯಗಳ ರಕ್ಷಣೆಗಾಗಿ ಇದೇ ಜನವರಿ 26ರಿಂದ ಮುಂದಿನ ವರ್ಷ ಜನವರಿ 26ರವರೆಗೆ 'ಸಂವಿಧಾನ ಬಚಾವೊ ರಾಷ್ಟ್ರೀಯ ಪಾದಯಾತ್ರೆ'ಯನ್ನು ಹಮ್ಮಿಕೊಂಡಿದ್ದೇವೆ. ಈ ಮೂಲಕ ಏಕತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ದೇಶದ ಪ್ರತಿ ಗ್ರಾಮ ಮತ್ತು ನಗರಗಳಿಗೂ ತಲುಪಿಸುತ್ತೇವೆ' ಎಂದು ಹೇಳಿದರು.
ಪವನ್ ಖೇರಾ ಕಾಂಗ್ರೆಸ್ ನಾಯಕಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವುದು ಅಥವಾ ಅವರ ವಿರುದ್ಧ ಪಿತೂರಿ ನಡೆಸುವುದು ದೇಶದ ಶೇ90ರಷ್ಟು ಜನರ ಹಕ್ಕುಗಳನ್ನು ಉಲ್ಲಂಘಿಸಿದಂತೆ... ಅವರ ಮೇಲೆ ದಾಳಿ ನಡೆಸಿದಂತೆ.