ಮಂಜೇಶ್ವರ :ಕಣ್ವತೀರ್ಥ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ಮಹಾಸಭೆ ಬುಧವಾರ ನಡೆಯಿತು. ಶಿಕ್ಷಕರು, ಪೋಷಕರು, ಊರಿನ ಗಣ್ಯರು ಸಹಿತ ಹಲವರು ಪಾಲ್ಗೊಂಡರು.
ಈ ಸಂದರ್ಭ ವಾರ್ಡ್ ಸದಸ್ಯ ರಾಜೇಶ್ ಮಜಲ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಪ್ರಿಯಾ ಮೊಯಿದ್ದೀನ್ ಬ್ಯಾಂಡ್ ಬಾರಿಸುವ ಮೂಲಕ ಬ್ಯಾಂಡ್ ಸೆಟ್ ಉದ್ವಾಟನೆ ನೆರವೇರಿಸಿದರು.
ಹಿರಿಯ ಕಬ್ಬಡ್ಡಿ ಆಟಗಾರ ಹಾಗೂ ಸುವರ್ಣಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಘು ಶೆಟ್ಟಿ ಲೋಗೋ ಬಿಡುಗಡೆಗೊಳಿಸಿದರು. ದಾಮೋದರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಜಲ್, ಎಸ್ ಎಂ ಸಿ ಅಧ್ಯಕ್ಷ ಬದ್ರುದ್ದೀನ್ ಕುಂಜತ್ತೂರು, ಎಸ್.ಎಂ.ಸಿ. ಸದಸ್ಯ ಅಬ್ದುಲ್ಲ, ಪಂಚಾಯತಿ ಸದಸ್ಯ ಅಬ್ದುರ್ರಹೀಂ, ರಾಜಕೀಯ ನೇತಾರ ಅಶ್ರಫ್ ಬಡಾಜೆ, ಅಶ್ರಫ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಸ್ವಾಗತಿಸಿ, ಅಬ್ದುಲ್ ಮಜೀದ್ ವಂದಿಸಿದರು.