ಲೂಧಿಯಾನ: ಪಂಜಾಬ್ ರಾಜ್ಯದ ಲೂಧಿಯಾನ ಪಶ್ಚಿಮ ಜಿಲ್ಲೆಯ ಆಮ್‌ಆದ್ಮಿ (ಎಎಪಿ) ಶಾಸಕ ಗುರುಪ್ರೀತ್ ಗೋಗಿ ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ಗುಂಡು (ಪಿಸ್ತೂಲ್) ತಗುಲಿ ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಶಾಸಕರ ತಲೆಗೆ ಗುಂಡು ತಗುಲಿದ ನಂತರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಲ್ಲಿ ವೈದ್ಯರು ಗುರುಪ್ರೀತ್ ಗೋಗಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಸ್ಕರ್ ಸಿಂಗ್ ತೇಜ ತಿಳಿಸಿದ್ದಾರೆ.
ಗೋಗಿ ಅವರ ಮೃತದೇಹವನ್ನು ಡಿಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದರು.
ತಲೆಗೆ ಆಕಸ್ಮಿಕವಾಗಿ ಗುಂಡು ತಗುಲಿ ಶಾಸಕರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರ ಹೇಳುತ್ತಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಕಾರಣ ತಿಳಿಯಲಿದೆ ಎಂದು ತೇಜ ಹೇಳಿದರು.