ಹೂಸ್ಟನ್: ಶಾರ್ಟ್ ವಿಡಿಯೊ ಆಯಪ್ ಟಿಕ್ ಟಾಕ್ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕದಲ್ಲಿ ಟಿಕ್‌ಟಾಕ್ ಕಾರ್ಯ ಪುನರಾರಂಭಗೊಂಡಿದೆ.
ಇಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಅಧಿಕಾರ ವಹಿಸಿಕೊಂಡ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಅಮೆರಿಕದಲ್ಲಿ ಸುಮಾರು 170 ಮಿಲಿಯನ್ ಮಂದಿ ಟಿಕ್‌ಟಾಕ್ ಬಳಕೆ ಮಾಡುತ್ತಿದ್ದಾರೆ.
'ಟಿಕ್ ಟಾಕ್ ಮತ್ತೆ ಬಂದಿದೆ. ನಿಮಗೆ ಗೊತ್ತಿರಬಹುದು, ನಾನೂ ಟಿಕ್‌ಟಾಕ್‌ನಲ್ಲಿ ಕೆಲವು ವಿಡಿಯೊಗಳನ್ನು ಮಾಡಿದ್ದೇನೆ. ಟಿಕ್‌ಟಾಕ್ ನಮಗೆ ಮತಗಳನ್ನು ತಂದುಕೊಟ್ಟಿದೆ. ನನಗೆ ಟಿಕ್ ಟಾಕ್ ಇಷ್ಟ' ಎಂದು ಟ್ರಂಪ್ ಹೇಳಿದ್ದಾರೆ.