ಬದಿಯಡ್ಕ: ಒಂದೇ ಮನಸ್ಸಿನ ಒಗ್ಗಟ್ಟಿನ ಪರಿಶ್ರಮವಿದ್ದರೆ ಅಸಾಧ್ಯವೆಂಬ ಕಾರ್ಯವಿಲ್ಲ. ಹಿರಿಯರ ಅನುಭವದೊಂದಿಗೆ ಕಿರಿಯರು ಮುಂದುವರಿದಾಗ ನೆನೆದ ಕಾರ್ಯ ಕೈಗೂಡುತ್ತದೆ. ಕ್ಷೇತ್ರದ ಆಸುಪಾಸಿನ ಎಲ್ಲಾ ಮನೆಗಳೂ ದೇವರ ಸೇವೆಯಲ್ಲಿ ತೊಡಗಿಕೊಂಡಾಗ ಅಲ್ಲಿನ ಚೈತನ್ಯ ವೃದ್ಧಿಯನ್ನು ಕಾಣುತ್ತದೆ ಎಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಹಿರಿಯರಾದ ಟಿ. ಕೆ. ನಾರಾಯಣ ಭಟ್ ಅಭಿಪ್ರಾಯಪಟ್ಟರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಕ್ಷತಾ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸತೀಶ್ ಎಡನೀರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಟ್ರಸ್ಟಿಗಳಾದ ರಾಧಾಕೃಷ್ಣ ರೈ, ನವೀನ್‍ಚಂದ್ರ, ಗೋಪಾಲ ಭಟ್ ಪಿ.ಎಸ್., ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶ್ಯಾಮಪ್ರಸಾದ ಮೇಗಿನಡ್ಕ, ಶ್ರೀಕೃಷ್ಣ ಭಟ್ ಪುದುಕೋಳಿ, ಸುಂದರ ಶೆಟ್ಟಿ ಕೊಲ್ಲಂಗಾನ, ಜ್ಯೋತಿ ಕಾರ್ಮಾರು, ಪೂರ್ಣಿಮಾ ಕಾರ್ಮಾರು, ಭಗವದ್ಭಕ್ತರು ಪಾಲ್ಗೊಂಡಿದ್ದರು. ಯುವಜನ ಸಮತಿಯ ವಿಜಯಕುಮಾರ್ ಮಾನ್ಯ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ವಿವಿಧ ತಂಡಗಳ ಮೂಲಕ ಊರಿನ ಮನೆಗಳ ಸಂಪರ್ಕಕ್ಕಾಗಿ ಕಿಟ್ ವಿತರಿಸಲಾಯಿತು.