ಬದಿಯಡ್ಕ: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದ ಕುಂಬ್ಡಾಜೆ ಪಂಚಾಯಿತಿ ಪಂಜರಿಕೆ ನಿವಾಸಿ ಸುಧಾಮ ಮಣಿಯಾಣಿ ಎಂಬವರ ಪುತ್ರ ಉದಯ(34)ಮೃತಪಟ್ಟಿದ್ದಾರೆ. ಹುಟ್ಟಿನಿಂದ ಎಂಡೋಸಂಬಂಧಿ ಕಾಯಿಲೆಬಾಧಿಸಿ ಹಾಸಿಗೆ ಸೇರಿದ್ದ ಉದಯ ಅವರ ಚಿಕಿತ್ಸೆಗಾಗಿ ಕುಟುಂಬ ಲಕ್ಷಾಂತರ ರೂ. ವ್ಯಯಿಸಿತ್ತು. ಕಳೆದ ಒಂದು ತಿಂಗಳಿನಿಂದ ಅಸೌಖ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.