ಹೊಸ ಹೊಸ ಸಾಧನೆಗಳ ಮೂಲಕ ಸುದ್ದಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಕ್ರಾಂತಿ ಮಾಡಿದೆ. ಇದೇ ಮೊದಲ ಬಾರಿಗೆ ಭಾರತದ ವತಿಯಿಂದ ಬಾಹ್ಯಾಕಾಶದಲ್ಲಿ ಜೀವ ಅರಳಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಡಿ.30ರಂದು ಇಸ್ರೋ ಹಾರಿಬಿಟ್ಟಿದ್ದ ಸ್ಪೇಡೆಕ್ಸ್ ನೌಕೆಯಲ್ಲಿ ಅಳವಡಿಸಿದ್ದ ಉಪಕರಣ ವೊಂದರಲ್ಲಿ ಇಡಲಾಗಿದ ಅಲಸಂದೆ ಬೀಜಗಳು ಇದೀಗ ಮೊಳಕೆಯೊಡೆದಿವೆ.
ಈ ಹಿನ್ನೆಲೆಯಲ್ಲಿ 'ಬಾಹ್ಯಾಕಾಶದಲ್ಲಿ ಜೀವ ಮೊಳಕೆಯೊಡೆದಿದೆ' ಎಂದು ಇಸ್ರೋ ಘೋಷಿಸಿದೆ. ಈ ಸಾಧನೆಗೆ ವಿಜ್ಞಾನಿಗಳ ಸಮುದಾಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಭವಿಷ್ಯದಲ್ಲಿ ವಿಜ್ಞಾನಿಗಳಿಗೆ ಆಗಸದಲ್ಲೇ ಅಗತ್ಯ ಆಹಾರವಸ್ತುಗಳನ್ನು ಬೆಳೆಯುವ ಪ್ರಯತ್ನದಲ್ಲಿ ಒಂದು ಯಶಸ್ವಿ ಹೆಜ್ಜೆ ಇಟ್ಟಿದೆ. ಇದೀಗ ಮೊಳಕೆಯೊಡೆದಿರುವ ಬೀನುಗಳು ಮುಂದಿನ 2-3 ಎಲೆಗಳಾಗಿ ಅರಳುವ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ.
ಏನಿದು ಪ್ರಯೋಗ?:
ಗುರುತ್ವಾಕರ್ಷಣಾ ಬಲವಿಲ್ಲದ ಬಾಹ್ಯಾಕಾಶದಲ್ಲಿ ಸಸಿಗಳು ಹೇಗೆ ಬೆಳೆಯುತ್ತವೆ. ಬಿನು ಮೊಳಕೆಯೊಡೆದು, 2 ಎಲೆಗಳ ಹಂತದವರೆಗೆ ಅವು ಹೇಗೆ ಸುಸ್ಥಿದ ವಾಗಿರುತ್ತದೆ ಎಂಬುದನ್ನು ತಿಳಿಯಲು ಇಸ್ರೋ ಈ ಪ್ರಯೋಗ ನಡೆಸಿತ್ತು. ಈ ಪ್ರಯೋಗದ ಭಾಗವಾಗಿ 8 ಅಲಸಂದೆ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು. ಬೀಜ ಮೊಳಕೆಯೊಡೆದ ಕತೆ ಗುರುತ್ವಾಕರ್ಷಣಾ ಬಲವಿಲ್ಲದ ಬಾಹ್ಯಾಕಾಶದಲ್ಲಿ ಸಸಿಗಳು ಹೇಗೆ ಬೆಳೆಯುತ್ತವೆ? ಬೀಜ ಮೊಳಕೆಯೊಡೆದು 2 ಎಲೆಗಳ ಹಂತದವರೆಗೆ ಅವು ಹೇಗೆ ಸುಸ್ಥಿರವಾಗಿರುತ್ತದೆ ಎಂಬುದನ್ನು ತಿಳಿಯಲು ಇಸ್ರೋಈ ಪ್ರಯೋಗ ನಡೆಸಿತ್ತು. ಈ ಪ್ರಯೋಗದ ಭಾಗವಾಗಿ ಅಲಸಂದೆ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು. ಅವುಗಳೀಗ ಮೊಳಕೆಯೊಡೆದಿವೆ. ಪ್ರಯೋಗ ನಡೆದಿದ್ದು ಎಲ್ಲಿ?: ಡಿ.30 ರಂದು ಇಸ್ರೋ ಪಿಎಸ್‌ಎಲ್‌ವಿ - ಸಿ60 ರಾಕೆಟ್ ಮೂಲಕ 'ಸ್ಪೇಡೆಕ್ಸ್' ಉಪಗ್ರಹ ಉಡ್ಡಯನ ಮಾಡಿತ್ತು. ಈ ರಾಕೆಟ್‌ನ ಕಡೆಯಭಾಗವುತನ್ನೊಂದಿಗೆಪೊಯಂ-4 (ಪಿಎಸ್-4ಆರ್ಬಿಟಲ್‌ಎಕ್ಸಪೆರಿಮೆಂಟ್ ಮಾಡ್ಯೂಲ್ ಅಥವಾ ಭಾರತೀಯ ಬಾಹ್ಯಾಕಾಶ ಲ್ಯಾಬ್) ಹೊತ್ತೊಯ್ದಿತ್ತು. ಈ ಪೊಯಂ ವಿವಿಧ ಉಪಕರಣಗಳನ್ನು ತನ್ನ ಒಡಲಲ್ಲಿ ಹೊಂದಿದ್ದು, ಅದರ ಮೂಲಕ ಒಟ್ಟು 24 ಪ್ರಯೋಗ ನಡೆಸಲು ಇಸ್ರೋ ಉದ್ದೇಶಿಸಿದೆ. ಈ ಪೈಕಿ ಕ್ರಾಪ್ಸ್ (ಕಾಂಪ್ಯಾಕ್ಟ್ ರಿಸರ್ಚ್ ಮಾಡ್ಯೂಲ್ ಫಾರ್ ಆರ್ಬಿಟಲ್ ಪ್ಲಾಂಟ್ ಸ್ಟಡೀಸ್) ಕೂಡಾ ಒಂದು. ಇದು ಭೂಮಿಯಿಂದ 350 ಕಿ.ಮೀ ಎತ್ತರದಲ್ಲಿ ಸಂಚರಿಸುತ್ತಿದೆ.
ಪ್ರಯೋಗ ಹೇಗೆ?
ಈ ಪ್ರಯೋಗಕ್ಕಾಗಿ ವಿಕ್ರಂ ಸಾರಾಬಾಯ್ ಬಾಹ್ಯಾಕಾಶ ಕೇಂದ್ರವು, ಬಾಕ್ಸ್ ರೀತಿಯ ವಿಶೇಷ ಘಟಕವೊಂದನ್ನು ತಯಾರಿಸಿದೆ. ಇದರಲ್ಲಿ ಉಷ್ಣಾಂಶ ಸೇರಿದಂತೆ ವಾತಾವರಣ ನಿಯಂತ್ರಣದ ವ್ಯವಸ್ಥೆ ಇದೆ. ಅದರೊಳಗೆ 8 ಅಲಸಂದೆ ಬೀಜಗಳನ್ನು ಇಟ್ಟು ಪ್ರಯೋಗ ನಡೆಸಲಾಗಿದೆ. ಇಂಥವ್ಯವಸ್ಥೆಯಲ್ಲಿ ಸಸ್ಯಗಳು ಹೇಗೆ ಬೆಳವಣಿಗೆ ಹೊಂದುತ್ತವೆ? ಬಾಹ್ಯಾಕಾಶದಲ್ಲಿ ಎದುರಾಗಬಹುದಾದ ಸನ್ನಿವೇಶಗಳು ಏನೇನು? ಅಂಥ ಸಂಭವನೀಯ ವ್ಯತಿರಿಕ್ತ ಸನ್ನಿವೇಶ ಎದುರಾದರೆ ಆಗ ಅವುಗಳ ಬೆಳವ ಣಿಗೆಯಲ್ಲಿ ಏನೇನು ಬದಲಾವಣೆ ಕಂಡು ಬರುತ್ತವೆ? ಎಂಬುದನ್ನು ಈ ಪ್ರಯೋಗದ ಮೂಲಕ ಅಧ್ಯಯನ ಮಾಡಲು ಇಸ್ರೋ ಉದ್ದೇಶಿಸಿದೆ.
ಪ್ರಯೋಗದ ಪ್ರಯೋಜನ ಏನು?
ಭಾರತ ಶೀಘ್ರದೇ ಬಾಹ್ಯಾಕಾಶ ಯಾನಕ್ಕೆ ಉದ್ದೇಶಿಸಿದೆ. ಜೊತೆಗೆ ಭವಿಷ್ಯದಲ್ಲಿ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಯ ಉದ್ದೇಶ ಹೊಂದಿದೆ. ಜೊತೆಗೆ ಅನ್ಯ ಗ್ರಹಗಳ ಸಂಶೋಧನೆಯ ಗುರಿಯನ್ನೂ ಹಾಕಿಕೊಂಡಿದೆ. ಇಂಥ ಯಾನದ ವೇಳೆ ವಿಜ್ಞಾನಿಗಳು ಬಾಹ್ಯಾಕಾಶದಲ್ಲೇ ಸುದೀರ್ಘ ಕಾಲ ಉಳಿದುಕೊಂಡಾಗ ಅವರಿಗೆ ಪೌಷ್ಟಿಕ ಆಹಾರ ಅತ್ಯಂತ ಅಗತ್ಯವಾಗಿರುತ್ತದೆ. ಹೀಗಾಗಿ ಬಾಹ್ಯಾಕಾಶದಲ್ಲಿ ಸಸ್ಯ ಬೆಳೆಯುವ ತಂತ್ರಜ್ಞಾನ ಸಿದ್ದಿಸಿದರೆ ಅದು ವಿಜ್ಞಾನಿಗಳ ಪಾಲಿಗೆ ವರವಾಗಲಿದೆ.
ಇದು ಸಣ್ಣ ಹೆಜ್ಜೆ, ಹೊಸ ಅಧ್ಯಾಯಕ್ಕೆ ಮುನ್ನುಡಿ ಭಾರತೀಯ ಬಾಹ್ಯಾಕಾಶ ಲ್ಯಾಚ್‌ನಲ್ಲಿ ಜೀವ ಅರಳಿದ್ದು ನೋಡಲು ಖುಷಿ ಆಗುತ್ತಿದೆ. ಅಂತರಿಕ್ಷದಲ್ಲಿ ಜೀವ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಮ್ಮದೇ ಆದ ಪ್ರಯೋಗ ಮೂಲಕ ತಿಳಿದುಕೊಳ್ಳುವ ಭಾಗವಾಗಿ ಇದು ನಮ್ಮ ಮೊದಲ ಯತ್ನವಾಗಿತ್ತು. ಈ ಸಣ್ಣ ಹೆಜ್ಜೆ ಮಾನವಸಹಿತ ಅಂತರಿಕ ಯಾತ್ರೆ, ನಮ್ಮದೇ ಸ್ಪೇಸ್ ಸ್ಟೇಷನ್ ಸ್ಥಾಪನೆಗೆ ಮುನ್ನಡಿಯಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಡಾ| ಎಸ್.ಸೋಮನಾಥ್ ತಿಳಿಸಿದ್ದಾರೆ.