HEALTH TIPS

ಬಾಂಗ್ಲಾ ರಾಷ್ಟ್ರಪಿತ ಮುಜಿಬುರ್ ಅಲ್ಲ, ಝಿಯಾವುರ್: ಪಠ್ಯಕ್ಕೆ ಸರ್ಕಾರದ ತಿದ್ದುಪಡಿ

ಢಾಕಾ: 1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯ ರೂವಾರಿ ಎಂಬ ಕೀರ್ತಿಯು ಝಿಯಾವುರ್ ರೆಹಮಾನ್‌ ಅವರಿಗೆ ಸೇರುತ್ತದೆ ಎಂದು ಬಾಂಗ್ಲಾದೇಶವು ಹೊಸ ಪಠ್ಯದಲ್ಲಿ ಸೇರಿಸಿದೆ. ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್‌ ಅವರನ್ನು ಈವರೆಗೂ ರಾಷ್ಟ್ರಪಿತ ಎಂದು ಕರೆಯಲಾಗುತ್ತಿತ್ತು.

ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ಈಗ ಇಂಥ ಹಲವು ಬದಲಾವಣೆಗಳನ್ನು ನೋಡುತ್ತಿದ್ದಾರೆ. ಪಠ್ಯದಲ್ಲಿ ಮುಜಿಬುರ್ ರೆಹಮಾನ್‌ ಅವರಿಗೆ ರಾಷ್ಟ್ರಪಿತ ಎಂಬ ಬಿರುದನ್ನು ತೆಗೆಯಲಾಗಿದೆ ಎಂದು ದಿ ಡೈಲಿ ಸ್ಟಾರ್‌ ಪತ್ರಿಕೆ ವರದಿ ಮಾಡಿದೆ.

2025ರ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಈ ಪಠ್ಯವನ್ನು ಜಾರಿಗೆ ತರಲಾಗಿದೆ. 1971ರ ಮಾರ್ಚ್ 26ರಂದು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಝಯಿವುರ್ ರೆಹಮಾನ್ ಅವರು ಘೋಷಿಸಿದರು. ಬಂಗಬಂಧು ಬದಲು ಮತ್ತೊಂದು ಸ್ವಾತಂತ್ರ್ಯದ ಘೋಷಣೆಯನ್ನು ಇವರು ಮಾಡಿದ್ದರು' ಎಂದು ರಾಷ್ಟ್ರೀಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಕೆಎಂ ರಿಯಾಝುಲ್ ಹಸನ್‌ ಹೇಳಿದ್ದಾರೆ.

'ಇತಿಹಾಸವನ್ನು ವೈಭವೀಕರಿಸಿ ಹೇರುವ ಪದ್ಧತಿಯಿಂದ ಪಠ್ಯಪುಸ್ತಕಗಳನ್ನು ಮುಕ್ತಗೊಳಿಸಲಾಗಿದೆ. ಶೇಖ್ ಮುಜಿಬುರ್ ರೆಹಮಾನ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿದ್ದಾಗ, ವೈರ್‌ಲೆಸ್‌ ಸಂದೇಶದ ಮೂಲಕ ಸ್ವಾತಂತ್ರ್ಯ ಘೋಷಣೆ ಮಾಡಿದರು ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಹೀಗಾಗಿ ವಾಸ್ತಾಂಶ ಆಧಾರಿತ ಮಾಹಿತಿಯನ್ನಷ್ಟೇ ಪಠ್ಯಕ್ಕೆ ಸೇರಿಸಲು ನಿರ್ಧರಿಸಲಾಯಿತು' ಎಂದು ಲೇಖಕ ಹಾಗೂ ಸಂಶೋಧಕ ರಖಾಲ್ ರಾಹಾ ತಿಳಿಸಿದ್ದಾರೆ.

ಅವಾಮಿ ಲೀಗ್‌ ಪಕ್ಷದ ಬೆಂಬಲಿಗರ ಪ್ರಕಾರ, 'ಸ್ವಾತಂತ್ರ್ಯ ಘೋಷಿಸಿದ್ದು ಮುಜಿಬುರ್‌ ರೆಹಮಾನ್‌ ಅವರೇ. ಆದರೆ ಆ ಸಂದರ್ಭದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸೇನೆಯ ಮೇಜರ್‌ ಹಾಗೂ ನಂತರದಲ್ಲಿ ಸೆಕ್ಟರ್ ಕಮಾಂಡರ್ ಆಗಿದ್ದ ಝಯಿವುರ್ ರೆಹಮಾನ್‌ ಅವರು ಮುಜಿಬುರ್‌ ಅವರ ಸೂಚನೆಯಂತೆ ಸ್ವಾತಂತ್ರ್ಯವನ್ನು ಘೋಷಿಸಿದರು.

ಬಾಂಗ್ಲಾದೇಶದ ಹಳೆಯ ನೋಟುಗಳ ಮೇಲಿರುವ ಮುಜಿಬುರ್ ರೆಹಮಾನ್ ಅವರ ಭಾವಚಿತ್ರವನ್ನು ತೆಗೆಯುವ ನಿರ್ಧಾರವನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಈ ಹಿಂದೆ ಕೈಗೊಂಡಿತ್ತು. ಮುಜಿಬುರ್ ರೆಹಮಾನ್ ಅವರು ಹತ್ಯೆಯಾದ ಆ. 15ರಂದು ನೀಡಲಾಗುತ್ತಿದ್ದ ರಾಷ್ಟ್ರೀಯ ರಜಾದಿನವನ್ನೂ ರದ್ದುಪಡಿಸಲಾಗಿದೆ.

ಬಾಂಗ್ಲಾದಲ್ಲಿ ವಿದ್ಯಾರ್ಥಿ ಚಳವಳಿ ಮೂಲಕ ದೇಶದಲ್ಲಿ ಸೃಷ್ಟಿಯಾದ ಅರಾಜಕತೆಯ ನಂತರ 2024ರ ಆ. 5ರಂದು ಮುಜಿಬುರ್ ಅವರ ಪುತ್ರಿ ಶೇಖ್ ಹಸೀನಾ ಅವರು ದೇಶದಿಂದ ಪಲಾಯನಗೊಂಡು, ಭಾರತಕ್ಕೆ ತೆರಳಿದ್ದರು. ನೋಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries