ಪೆರ್ಲ: ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಎನ್ನೆಸ್ಸಸ್ ವಿದ್ಯಾರ್ಥಿಗಳನ್ನು ಮನೆಗೆ ಕರೆಯಿಸಿ ಅತಿಥ್ಯ ಏರ್ಪಡಿಸುವ ಮೂಲಕ ಸಾಹಿತಿಗಳನ್ನು, ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಮಾಜಸೇವೆಯ ಆದರ್ಶದಂಪತಿಗಳಾದ ಮೊಹಮ್ಮದಾಲಿ ಆಯಿಷಾ ಪೆರ್ಲ ದಂಪತಿಗಳು ತಮ್ಮ ಮನೆಯಲ್ಲಿಯೇ ಸರಳ ಕಾರ್ಯಕ್ರಮ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು.
ಮನೆಯ ಅಂಗಳವನ್ನೇ ವೇದಿಕೆಯನ್ನಾಗಿಸಿ ವಿದ್ಯಾರ್ಥಿಗಳಿಗೆ ಹಾಡು, ಆಟ, ಬೋಧನೆಗಳಿಗೆ ಅವಕಾಶವೊದಗಿಸುವ ಮೂಲಕ ವಿಶಿಷ್ಠ ಅನುಭೂತಿಗೆ ಪಾತ್ರರಾದರು. ಈ ಸಂದರ್ಭದಲ್ಲಿ ಕಣ್ಣೂರು ವಿ.ವಿಯಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಬಿರುದು ಪಡೆದ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದಾಲಿ ಬೆದ್ರಂಪಳ್ಳ ಹಾಗೂ ಪಣಿಯಾಡಿ ಪ್ರಶಸ್ತಿ ಪುರಸ್ಕøತ ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗಳನ್ನುಗೈದ ಹಲವು ಪ್ರತಿಭೆಗಳನ್ನುಅಭಿನಂದಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಮತ್ತು ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಮುಖ್ಯ ಅತಿಥಿಗಳಾಗಿದ್ದರು. ಸಮಾಜ ಸೇವಕಿ ಆಯಿμÁ ಎ.ಎ.ಪೆರ್ಲ, ಮೊಹಮ್ಮದಾಲಿ ಪೆರ್ಲ, ಡಾಕ್ಟರ್ ನಿಶಾದ್ ಪೆರ್ಲ ಮೊದಲಾದವರು ಮಾತನಾಡಿದರು.