ಕಾಸರಗೋಡು: ಕೇರಳ ವ್ಯಾಪಾರಿ ಸಮಿತಿ ವತಿಯಿಂದ ವಾಣಿಜ್ಯ ಸಂರಕ್ಷಣಾ ಸಂದೇಶ ಜಾಥಾ ಕಾಸರಗೋಡಿನಿಂದ ಆರಂಭಗೊಂಡಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರ ಜಾಥಾ ಕ್ಯಾಪ್ಟನ್ ರಾಜ್ಯ ಕಾರ್ಯದರ್ಶಿ ಇ. ಎಸ್. ಬಿಜು ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಸಂಘಟನೆ ರಾಜ್ಯಾಧ್ಯಕ್ಷ ವಿ. ಕೆ. ಸಿ. ಮಹಮ್ಮದ್ ಕೋಯ ಉದ್ಘಾಟಿಸಿದರು. ಸ್ವಾಗತ ಸಮಿತಿ ಅದ್ಯಕ್ಷ ಪಿ.ವಿ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಜಾಥಾ ಉಪನಾಯಕ ವಿ. ಗೋಪಿನಾಥ್, ವ್ಯವಸ್ಥಾಪಕ ಎಸ್. ದಿನೇಶ್ ಹಾಗೂ ಜಾಥಾ ಸದಸ್ಯರಾದ ಕೆ. ಎಂ. ಲೆನಿನ್, ವಿ. ಪಾಪಚ್ಚನ್, ಎಂ. ಪಿ. ಅಬ್ದುಲ್ ಗಫೂರ್, ಮಿಲ್ಟನ್ ಜೆ.ತಲಕೊಟ್ಟೂರು, ಆರ್. ರಾಧಾಕೃಷ್ಣನ್, ಸೀನತ್ ಇಸ್ಮಾಯಿಲ್, ಮುಖಂಡರಾದ ಕೆ. ಪ್ರಕಾಶನ್, ಉದಯ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶೋಭಾ ಬಾಲನ್, ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಸುಗುಣನ್, ಕಣ್ಣೂರು ಜಿಲ್ಲಾಧ್ಯಕ್ಷ ಕೆ. ವಿಜಯನ್, ಸಿಪಿಐ(ಎಂ) ಕಾಸರಗೋಡು ಏರಿಯಾ ಕಾರ್ಯದರ್ಶಿ ಟಿ. ಎಂ. ಎ. ಕರೀಂ ಉಪಸ್ಥಿತರಿದ್ದರು.
ವ್ಯಾಪಾರಿ ಸಮಿತಿ ಜಿಲ್ಲಾಧ್ಯಕ್ಷ ಪಿ. ಕೆ.ಗೋಪಾಲನ್ ಸ್ವಾಗತಿಸಿದರು. ಈ ತಿಂಗಳ 25 ರಂದು ತಿರುವನಂತಪುರದಲ್ಲಿ ವ್ಯಾಪಾರ ಸಂರಕ್ಷಣಾ ಸಂದೇಶ ಜಾಥಾ ಸಮಾರೋಪಗೊಳ್ಳಲಿದೆ.