ಕುಂಬಳೆ: ಪಿಸ್ತ ಬೀಜದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷ ಪ್ರಾಯದ ಮಗು ದಾರುಣವಾಗಿ ಮೃತಪಟ್ಟಿದೆ. ಕುಂಬಳೆ ಭಾಸ್ಕರನಗರ ನಿವಾಸಿ ಅನ್ವರ್-ಮೆಹರೂಫಾ ದಂಪತಿ ಪುತ್ರ ಅನಸ್ ಮೃತಪಟ್ಟ ಬಾಲಕ. ಮೆಹರೂಫಾ ಅವರ ಉಪ್ಪಳದ ತವರಿನಲ್ಲಿ ಘಟನೆ ನಡೆದಿದೆ.
ಶನಿವಾರ ಸಂಜೆ ಮಗು ಪಿಸ್ತದ ಬೀಜ ಸಿಪ್ಪೆಯೊಂದಿಗೆ ತಿಂದಿದ್ದು, ತಕ್ಷಣ ಗಂಟಲಲ್ಲಿ ಸಿಲುಕಿಕೊಂಡಿದ್ದ ಬೀಜ ಹೊರತೆಗೆದು, ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ, ಬೀಜದ ಯಾವುದೇ ಭಾಗ ಗಂಟಲಲ್ಲಿ ಉಳಿದಿಲ್ಲ ಎಂದು ವೈದ್ಯರು ತಿಳಿಸಿದ್ದ ಹಿನ್ನೆಲೆಯಲ್ಲಿ ಮನೆಗೆ ವಾಪಸಾಗಿದ್ದರು. ಭಾನುವಾರ ಬೆಳಗ್ಗೆ ಮಗುವಿಗೆ ಉಸಿರಾಟದ ಸಮಸ್ಯೆ ತಲೆದೋರಿದ್ದು, ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಹಾದಿಮಧ್ಯೆ ಮಗು ವಾಸನ್ನಪ್ಪಿದೆ. ಪಿಸ್ತದ ತೆಳುವಾದ ಸಿಪ್ಪೆ ಗಂಟಲಲ್ಲಿ ಉಳಿದುಕೊಂಡಿರಬೇಕೆಂದು ಸಂಶಯಿಸಲಾಗಿದೆ.