ಉಪ್ಪಳ: ಕೇರಳ ಸರ್ಕಾರ ಜನರೊಂದಿಗೆ ಸಂವಾದ ನಡೆಸುವ ಏಕೈಕ ಮಾಧ್ಯಮವಾಗಿ ಹೆಚ್ಚು ಜನಪರವಾಗಿ ಅದಾಲತ್ ಗಮನಾರ್ಹ ಎಂದು ರಾಜ್ಯ ಕ್ರೀಡೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಯಾತ್ರೆ ಹಾಗೂ ರೈಲ್ವೆ ಇಲಾಖೆ ಸಚಿವ ವಿ.ಅಬ್ದು ರಹಿಮಾನ್ ಹೇಳಿದರು.
ಉಪ್ಪಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆದ ಮಂಜೇಶ್ವರ ತಾಲೂಕು ಮಟ್ಟದ ಕುಂದುಕೊರತೆ ಹಾಗೂ ಬೆಂಬಲ ಅದಾಲತ್‍ನ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಅದಾಲತ್ ಗಳು ಮೊದಲ ಹಂತದಿಂದ ಎರಡನೇ ಹಂತಕ್ಕೆ ತಲುಪಿದಾಗ ದೂರುಗಳ ಸಂಖ್ಯೆ ಭಾರಿ ಕಡಿಮೆ ಕಂಡುಬಂದಿದೆ. ಮೊದಲ ಹಂತದಲ್ಲಿಯೇ ಹಲವು ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿರುವುದು ಈ ಅದಾಲತ್ ನ ಸಾಧನೆಯಾಗಿದೆ ಎಂದು ಸಚಿವರು ಹೇಳಿದರು.
ಕಡತಗಳು ಕಡಿಮೆಯಾಗಿರುವುದರಿಂದ ಅಧಿಕಾರಿಗಳು ಜನರ ದೂರು ಮತ್ತು ಅರ್ಜಿಗಳನ್ನು ಸಕಾಲದಲ್ಲಿ ಪರಿಹರಿಸಬೇಕು ಎಂದು ಸಚಿವರು ಹೇಳಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದಿಕ್ ದಂಡೆಗೋಳಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಖದೀಜತ್ ರಿಸಾನ, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವಿನೊ ಮೊಂತೇಎರೊ. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್., ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಎಸ್. ಭಾರತಿ, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಎಡಿಎಂ ಪಿ.ಅಖಿಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಸ್ವಾಗತಿಸಿ, ಕಾಸರಗೋಡು ಆರ್‍ಡಿಒ ಪಿ.ಬಿನುಮೋನ್ ವಂದಿಸಿದರು.