ಕುಂಬಳೆ: ಕುಂಬಳೆ ಶಿರಿಯ ಮರಳು ಸಂಗ್ರಹ ಕಡವಿನಲ್ಲಿ ಕರ್ತವ್ಯಲೋಪವೆಸಗಿದ ಸೂಪರ್‍ವೈಸರ್ ಕೆ.ಎಂ ಅಬ್ಬಾಸ್ ಎಂಬಾತನನ್ನು ಪಂಚಾಯಿತಿ ಆಡಳಿತ ಸಮಿತಿ ಅಮಾನತುಗೊಳಿಸಿದೆ.ಕಡವಿನ ನೌಕರರ ಪಟ್ಟಿಯಿಂದ ಅಬ್ಬಾಸ್ ಹೆಸರು ಹೊರತುಪಡಿಸಲಾಗಿದ್ದು, ಸೂಪರ್‍ವೈಸರ್ ಹುದ್ದೆಯನ್ನು ಅಮಾನತಿನಲ್ಲಿಡಲಾಗಿದೆ.
ಕಡವಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸದೆ ವೇತನ ಪಡೆಯುತ್ತಿದ್ದ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಈ ಕ್ರಮ ಕೈಗೊಂಡಿದೆ. ಕಡವಿನ ಕಾರ್ಯಚಟುವಟಿಕೆ ಬಗ್ಗೆ ಅರಿತುಕೊಳ್ಳಲು ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ನಿಷ್ಕ್ರಿಯಗೊಂಡಿದ್ದು, ಇದನ್ನು ದುರಸ್ತಿಪಡಿಸುವುದರ ಜತೆಗೆ ಕಡವಿನಲ್ಲಿ ಕೆಲಸ ನಿರ್ವಹಿಸುವವರ ಬಯೋಮೆಟ್ರಿಕ್ ಪಂಚಿಂಗ್ ವ್ಯಸ್ಥೆ ಏರ್ಪಡಿಸಲೂ ಆಡಳಿತ ಸಮಿತಿ ತೀರ್ಮಾನಿಸಿದೆ. ಸರಿಯಾಗಿ ಕೆಲಸ ನಿರ್ವಹಿಸದೆ ಇದುವರೆಗೆ ಪಡೆದಿರುವ ವೇತನವನ್ನು ಬಡ್ಡಿ ಸೇರಿಸಿ ವಸೂಲಿಮಾಡಲೂ ಆಡಳಿತ ಸಮಿತಿ ತೀರ್ಮಾನ ಕೈಗೊಂಡಿತು.