ಕಾಸರಗೋಡು: ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ತಂತ್ರಿ ಸ್ಥಾನ ಅಲಂಕರಿಸಿದ್ದ ಮಂಜುನಾಥ ಅಡಿಗ (80) ನಿಧನರಾದರು. ಮಂಜುನಾಥ ಅಡಿಗ ಅವರು ಇಪ್ಪತ್ತು ವರ್ಷಗಳ ಕಾಲ ದೇವಸ್ಥಾನದ ತಂತ್ರಿ ಮತ್ತು ಪ್ರಧಾನ ಅರ್ಚಕರಾಗಿದ್ದರು. ಬುಧವಾರ ಮಧ್ಯಾಹ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ, ಅವರು ಪ್ರಸ್ತುತ ತಂತ್ರಿ ಮತ್ತು ಮುಖ್ಯ ಅರ್ಚಕ ನಿತ್ಯಾನಂದ ಅಡಿಗ ಅವರ ತಂದೆಯಾಗಿದ್ದಾರೆ.
ಮಂಜುನಾಥ ಅಡಿಗ ಅವರು ಹತ್ತು ಸಾವಿರಕ್ಕೂ ಹೆಚ್ಚು ಪರಮ ಚಂಡಿಕಾ ಹೋಮಗಳನ್ನು ನಡೆಸಿಕೊಟ್ಟಿದ್ದಾರೆ. ಪತ್ನಿ- ಮಂಗಳಾ ಗೌರಿ. ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.