1)ಬದಿಯಡ್ಕ: ತಿರುವನಂತಪುರಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ಇಂಗ್ಲಿಷ್ ಭಾಷಣ ಹಾಗೂ ಸಂಸ್ಕøತ ಕಂಠಪಾಠ ಸ್ಪರ್ಧೆಗಳಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ ಸಮನ್ವಿತ ವಿ. 'ಎ' ಗ್ರೇಡ್ ಪಡೆದಿರುತ್ತಾಳೆ. ಈಕೆ ವಳಕ್ಕುಂಜ ಗೋಪಾಲಕೃಷ್ಣ ಭಟ್ ಹಾಗೂ ವಾಣಿ ಸರಸ್ವತಿ ದಂಪತಿಯ ಪುತ್ರಿ..
(2)ಬದಿಯಡ್ಕ: ತಿರುವನಂತಪುರಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ಸಂಸ್ಕøತ ಕಥಾ ರಚನಾ ಸ್ಪರ್ಧೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ ಸಿಂಧೂರ ಕೆ ಆರ್ 'ಎ' ಗ್ರೇಡ್ ಪಡೆದಿರುತ್ತಾಳೆ. ಈಕೆ ಕುಂಜಾರು ರಾಜಾರಾಮ ಭಟ್ ಹಾಗೂ ದೇವಕಿದೇವಿ ದಂಪತಿಯ ಪುತ್ರಿ.