ಕಾಸರಗೋಡು: ಚಿರತೆ ಸೇರಿದಂತೆ ವನ್ಯಪ್ರಾಣಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘ ಇರಿಯಣ್ಣಿ ಪ್ರದೇಶ ಸಮಿತಿ ನೇತೃತ್ವದಲ್ಲಿ ಮುಳಿಯಾರು ಅರಣ್ಯ ಕಚೇರಿ ವರೆಗೆ ರೈತರ ತಂಡವೊಂದು ಪ್ರತಿಭಟನಾ ಮೆರವಣಿಗೆ ನಡೆಸಿತು.
ಮೆರವಣಿಗೆಯಲ್ಲಿ ನೂರಾರು ಕೃಷಿಕರು ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಕುಞÂರಾಮನ್ ಉದ್ಘಾಟಿಸಿದರು. ಕೆ.ವಿ.ಸಜೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ)ಕಾರಡ್ಕ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ.ಮಾಧವನ್, ರೈತ ಸಂಘದ ಪ್ರಾದೇಶಿಕ ಕಾರ್ಯದರ್ಶಿ ಇ.ಮೋಹನನ್, ಅಧ್ಯಕ್ಷ ಎ.ವಿಜಯಕುಮಾರ್, ಬಿ.ಕೆ.ನಾರಾಯಣನ್, ಪಿ.ಬಾಲಕೃಷ್ಣನ್, ಮಿನಿ ಪಿ.ವಿ., ಕೆ.ಪ್ರಭಾಕರನ್, ಪಿ.ರವೀಂದ್ರನ್ ಉಪಸ್ಥಿತರಿದ್ದರು. ವಿ.ವಾಸು ಸ್ವಾಗತಿಸಿದರು.