ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ಮಹೋತ್ಸವದಂಗವಾಗಿ ಸೋಮವಾರ ಮುಂಜಾನೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.
ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕ್ಷೇತ್ರ ಜೀರ್ಣೋದ್ಧಾರ ಕಾಮಗಾರಿಗೆ ಧನ ಸಹಾಯ ನೀಡಿದ ಕೊಡುಗೈ ದಾನಿ ಮಂಗಳೂರಿನ ಎಸ್.ಎಲ್.ಶೇಟ್ ಜ್ಯುವೆಲ್ಲರಿಯ ಮಾಲಕÀ ರವೀಂದ್ರ ಶೇಟ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ನ್ಯಾಯವಾದಿ ಸತೀಶ್ ಕೊಟೆಕಣಿ, ಗ್ರಾ. ಪಂ.ಉಪಾಧ್ಯಕ್ಷ ಜಯಂತ ಪಾಟಾಳಿ, ಚಿದಾನಂದ ಆಳ್ವ, ದೇವದಾಸ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಕಾರ್ಯಕ್ಕೆ ಧನ ಸಹಾಯ ನೀಡಿದ ದಾನಿಗಳಿಗೆ ಕೃತಜ್ಞತ ಪತ್ರ ವಿತರಿಸಲಾಯಿತು. ಆಶೋಕ್ ಅರಿಯಪ್ಪಾಡಿ ನೇತೃತ್ವದಲ್ಲಿ ಭಕ್ತಿ ಸಂಕೀರ್ತನೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಿ.ರಾಜೇಂದ್ರ ರೈ ಸ್ವಾಗತಿಸಿ, ನಿರೂಪಿಸಿದರು.