ಪತ್ತನಂತಿಟ್ಟ: ಮಕರ ಬೆಳಕು ದಿನದಂದು ಅಯ್ಯಪ್ಪ ವಿಗ್ರಹದ ಮೇಲೆ ಅಲಂಕರಿಸುವ ವಿಶಿಷ್ಟ ವಸ್ತ್ರಾಭರಣ ಹೊತ್ತ ಮೆರವಣಿಗೆ ಪಂದಳಂನಿಂದ ನಿನ್ನೆ ಮುಂಜಾನೆ ಹೊರಟಿತು.
ಪಂದಳಂ ವಲಿಯ ಕೋವಿಲ್ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ತಿರುವಾಭರಣ ದರ್ಶನ ನಡೆಯಿತು. ವಿಶೇಷ ಪೂಜೆಗಳ ನಂತರ ಮೆರವಣಿಗೆ ಪ್ರಾರಂಭವಾಯಿತು. ದರ್ಶನಕ್ಕೆ ಭಾರಿ ಜನದಟ್ಟಣೆ ಇತ್ತು.
ಭಾನುವಾರ, ಮೆರವಣಿಗೆ ಅಯಿರೂರ್ ಚೆರುಕೊಲ್ಪುಳ ದೇವಸ್ಥಾನದಲ್ಲಿ ರಾತ್ರಿ ಠಿಕಾಣಿ ಹೂಡಿತ್ತು. ಸೋಮವಾರ ಲಾಹಾ ಇನ್ ನಲ್ಲಿ ಮೆರವಣಿಗೆ ತಂಗಲಿದೆ. ಮೆರವಣಿಗೆಯು ವಿವಿಧ ಕೇಂದ್ರಗಳ ಮೂಲಕ ಹಾದುಹೋಗಿ ಸ್ವಾಗತಗಳನ್ನು ಪಡೆಯುತ್ತಿದೆ. ಮೆರವಣಿಗೆ ಸಾಂಪ್ರದಾಯಿಕ ಮಾರ್ಗದಲ್ಲಿ ವಿವಿಧ ದೇವಾಲಯಗಳ ಮೂಲಕ ಹಾದು ಮಂಗಳವಾರ ಮಧ್ಯಾಹ್ನ ಚೆರಿಯಾನವತ್ತಂ ತಲುಪಲಿದೆ. ನಂತರ, ನೀಲಿಮಲ ದಾಟಿ ಸಂಜೆ 5 ಗಂಟೆಗೆ ಸರಂಕುತ್ತಿ ತಲುಪುತ್ತವೆ.
ದೇವಸ್ವಂ ಪ್ರತಿನಿಧಿಗಳು ಸರಂಕುತ್ತಿಯಲ್ಲಿ ಮೆರವಣಿಗೆಯನ್ನು ವಿಧ್ಯುಕ್ತವಾಗಿ ಸ್ವೀಕರಿಸುತ್ತಾರೆ. ಸನ್ನಿಧಿಗೆ ಮೆರವಣಿಗೆಯನ್ನು ಕರೆದೊಯ್ದ ನಂತರ, ತಿರುವಾಭರಣವನ್ನು ಅಲಂಕರಿಸಲಾಗುತ್ತದೆ. ಮತ್ತು ದೀಪ ದೇವದತ್ತ ಮಾಡಲಾಗುತ್ತದೆ.ಬಳಿಕ ದೇವ ಬೆಳಗುವ ವೇಳೆ, ಪೊನ್ನಂಬಲ ಬೆಟ್ಟದಲ್ಲಿ ಮಕರ ಜ್ಯೋತಿ ದಶರ್Àನವಾಗುತ್ತದೆ.