ಸಮರಸ ಚಿತ್ರಸುದ್ದಿ: ಕುಂಬಳೆ : ವಿದುಷಿಃ ಡಾ.ವಿದ್ಯಾಲಕ್ಷ್ಮಿ ಬೇಳ ಇವರ ನಾಟ್ಯ ವಿದ್ಯಾನಿಲಯ ಕುಂಬಳೆ ಘಟಕದ ಶಿಷ್ಯರು, ಅವಳಿ ಸಹೋದರಿಯರಾದ ಅಂಕಿತ - ಅರ್ಪಿತ ಒಡಿಯೂರು, ಸೌಜನ್ಯ ಮುಗುಳಿ, ಕಾವ್ಯಶ್ರೀ ಬೇಕೂರು, ಸಿಂಚನಲಕ್ಷ್ಮಿ ಕೋಡಂದೂರು, ಆದಿಶ್ರೀ ಪೈವಳಿಕೆ ಹಾಗೂ ಪೂಜಾಶ್ರೀ ಕುಂಬಳೆ ಇವರು ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ವಿದ್ವತ್ ಪರೀಕ್ಷೆಯ ನಾಲ್ಕನೇ ಸಾಲಿನ ನೃತ್ಯ ವಿದ್ಯಾರ್ಥಿಗಳಾಗಿದ್ದು ಇದರೊಂದಿಗೆ ಈ ನೃತ್ಯ ಸಂಸ್ಥೆಯಿಂದ 22 ವಿದ್ಯಾರ್ಥಿಗಳು ವಿದ್ವತ್ತನ್ನು ಪೂರೈಸಿ ನೃತ್ಯ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.