ಮುಂಬೈ: ಹೆಸರಾಂತ ಪತ್ರಕರ್ತ, ಕವಿ, ಚಿತ್ರ ನಿರ್ಮಾಪಕ ಪ್ರೀತಿಶ್ ನಂದಿ ಅವರು ಬುಧವಾರ ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ನಂದಿ ಅವರ ಗೆಳೆಯ, ನಟ ಅನುಪಮ್ ಖೇರ್ ಅವರು, ಆತ್ಮೀಯ ಗೆಳೆಯನ ಅಗಲಿಕೆಯಿಂದ ನೋವಾಗಿದೆ.
ಶಿವಸೇನೆಯಿಂದ ರಾಜ್ಯಸಭೆ ಸದಸ್ಯರೂ ಆಗಿದ್ದ ಪ್ರಿತೀಶ್ ನಂದಿ ಅವರು ಪ್ರಾಣಿ ಹಕ್ಕುಗಳ ಪರ ವಕೀಲರಾಗಿದ್ದರು. ಅವರ ಒಡೆತನದ ಪ್ರೀತಿಶ್ ನಂದಿ ಕಮ್ಯುನಿ ಕೇಷನ್ ಮೂಲಕ, 'ಸುರ್', 'ಕಾಂಟೆ', 'ಝಂಕಾರ್ ಬೀಟ್ಸ್', 'ಚಮೇಲಿ', 'ಹಜಾರೋ ಖ್ವಾಯಿಶೆ ಐಸಿ' ಮತ್ತು 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್' ಚಿತ್ರಗಳನ್ನು ನಿರ್ಮಿಸಿದ್ದರು.
'ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್ ಸಿರೀಸ್ ಅನ್ನೂ ನಿರ್ಮಿಸಿದ್ದ ಅವರು, ಇಂಗ್ಲಿಷ್‌ನಲ್ಲಿ 40 ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಬಂಗಾಳಿ, ಉರ್ದು, ಪಂಜಾಬಿ ಭಾಷೆಗಳ ಕವನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು.
ಅವರ ಆಪ್ತ ಸ್ನೇಹಿತ, ನಟ ಅನುಪಮ್ ಖೇರ್, ನಂದಿ ಸಾವಿನ ಕುರಿತಂತೆ ಎಕ್ಸ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.