HEALTH TIPS

ಅನುವಾದ ಸಾಹಿತ್ಯದಲ್ಲಿ ಸಾಧನೆ ಮಾಡಿದ ತಮಿಳು ಸಾಹಿತಿಗಳಿಗೆ ಸರ್ಕಾರದಿಂದ ಫ್ಲಾಟ್‌

 ಚೆನ್ನೈ: ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತಮಿಳಿನ 10 ಸಾಹಿತಿಗಳಿಗೆ ತಮಿಳುನಾಡು ಸರ್ಕಾರದಿಂದ ಉಚಿತ ಫ್ಲಾಟ್‌ಗಳನ್ನು ನೀಡಲಾಗಿದೆ. ತಮಿಳುನಾಡು ಹೌಸಿಂಗ್ ಬೋರ್ಡ್‌ನಿಂದ ಈ ಫ್ಲಾಟ್‌ಗಳನ್ನು ಚೆನ್ನೈನಲ್ಲಿ ನಿರ್ಮಿಸಲಾಗಿದೆ.

ಸಾಹಿತಿಯೂ ಆಗಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಕೆ. ಕರುಣಾನಿಧಿ ಅವರ ಹೆಸರಿನಲ್ಲಿ ಅನುವಾದ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಸಾಹಿತಿಗಳಿಗೆ ಈ ಉಡುಗೊರೆ ನೀಡಲಾಗಿದೆ. ಒಂದು ಫ್ಲಾಟ್‌ನ ಮಾರುಕಟ್ಟೆ ಮೌಲ್ಯ ₹40 ಲಕ್ಷ ಎನ್ನಲಾಗಿದೆ.

ಸಚಿವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಫ್ಲಾಟ್‌ಗಳನ್ನು ಸಿಎಂ ಎಂ.ಕೆ. ಸ್ಟಾಲಿನ್ ಅವರು ಉದ್ಘಾಟಿಸಿದರು. ಈ ವೇಳೆ ಫಲಾನುಭವಿಗಳಿಗೆ ಫ್ಲಾಟ್‌ ದಾಖಲೆಗಳನ್ನು ಹಸ್ತಾಂತರಿಸಲಾಯಿತು.

ಉಡುಗೊರೆ ಪಡೆದ ಈ ಸಾಹಿತಿಗಳು ವಿವಿಧ ಅವಧಿಯಲ್ಲಿ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ವಿಶ್ವದ ಅನೇಕ ಭಾಷೆಗಳಲ್ಲಿನ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ತಮಿಳಿಗೆ ಅನುವಾದಿಸಿದ್ದರು. ಅವರಿಗೆ ವಿವಿಧ ಅವಧಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗಳು ಸಿಕ್ಕಿದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries