ಹಾಲು ಕುದಿಸುವಾಗ, ಟೀ ಮಾಡುವಾಗ ಈ ಬಗೆಯ ಸಮಸ್ಯೆ ಸರ್ವೇ ಸಾಮಾನ್ಯ ಅಲ್ವಾ? ಹಾಲು ಕುದಿ ಬಂದು ಪಾತ್ರೆಯಿಂಣದ ಹೊರ ಚೆಲ್ಲುವುದನ್ನು ತಡೆಗಟ್ಟಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ ವರ್ಕ್ ಆಗುತ್ತೆ:
ಪಾತ್ರೆಯ ಬಾಯಿಗೆ ಸ್ವಲ್ಪ ಬೆಣ್ಣೆ ಹಚ್ಚುವುದು,- ಈ ಟಿಪ್ಸ್ ಟ್ರೈ ಮಾಡಿಲ್ಲ ಎಂದಾದರೆ ಒಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ವರ್ಕ್ ಆಗುತ್ತೆ, ಪಾತ್ರೆಯ ಬಾಯಿ ಹಾಗೂ ಒಳಗಡೆ ಸ್ವಲ್ಪ ಬೆಣ್ಣೆ ಹಚ್ಚಿದರೆ ಸಾಕು ಹಾಲು ಉಕ್ಕಿ ಹರಿಯುವುದನ್ನು ತಪ್ಪಿಸಬಹುದು, ಹಾಗಂತ ತುಂಬಾ ಕುದಿಸಿದರೆ ಖಂಡಿತ ಉಕ್ಕಿ ಹರಿಯುತ್ತದೆ, ಈ ಟ್ರಿಕ್ ಬಳಸಿದರೆ ಪಟ್ ಅಂತ ಹಾಲು ಹೊರ ಚೆಲ್ಲುವುದನ್ನು ತಡೆಗಟ್ಟಬಹುದು.ಹಾಗಂತ ಬೆಣ್ಣೆ ತುಂಬಾ ಹಚ್ಚಬಾರದು, ಸ್ವಲ್ಪ ಹಚ್ಚಿದರೆ ಸಾಕು.
ಸ್ಪಿಲ್ ಸ್ಟಾಪರ್- ಹಾಲು ಹೊರಚೆಲ್ಲುವುದನ್ನು ತಡೆಯಲು ಸ್ಪಿಲ್ ಸ್ಟಾಪರ್ ಅಂತ ದೊರೆಯುತ್ತದೆ, ಅದನ್ನು ಕೂಡ ಬಳಸಬಹುದು. ಇದನ್ನು ಹಾಲಿನ ಪಾತ್ರೆ ಮೇಲಿಟ್ಟು ಕುದಿಸಿದರೆ ಪಾತ್ರೆಗೆ ಫಿಟ್ ಆಗಿ ಕೂರುವ ಈ ಸ್ಪಿಲ್ ಸ್ಟಾಪರ್ (ಇದೊಂದು ರಬ್ಬರ್ ಡಸ್ಕ್) ಹಾಲು ಹೊರ ಚೆಲ್ಲುವುದನ್ನು ತಡೆಗಟ್ಟಲು ಸಹಕಾರಿ.
ಹಾಲಿನ ಮೇಲೆ ನೊರೆ ಬರಲಾರಂಭಿಸಿದಾಗ ನೀರು ಚಿಮುಕಿಸುವುದು- ಹೌದು ನೀವು ಹಾಲನ್ನು ಇಟ್ಟು ಕಾಯಿಸಲಾರಂಭಿಸಿದಾಗ ಹಾಲು ಕುದಿ ಬಂದು ಮೇಲ್ಭಾಗ ನೊರೆ ರೀತಿ ಬರುತ್ತದೆ, ಆವಾಗ ಸ್ವಲ್ಪ ನೀರು ಚಿಮುಕಿಸಿದರೆ ಸಾಕು ಹಾಲು ಕುದಿ ಬರಲ್ಲ. ಈ ಟ್ರಿಕಕ್ ಬಳಸಿದರೆ ಹಾಲನ್ನು ಮತ್ತಷ್ಟು ಹೊತ್ತು ಕುದಿಸಬಹುದು.
ಹಾಲು ಕುದಿ ಬರುವಾಗ ಮರದ ಸ್ಪೂನ್ ಹಾಕಿಡಿ-
ನೀವು ಹಾಲಿನ ಪಾತ್ರೆಗೆ ಹಾಲು ಸುರಿದು ಮರದ ಸ್ಪೂನ್‌ವೊಂದು ಹಾಕಿಟ್ಟರೆ ಹಾಲು ಕುದಿ ಬಂದು ಹೊರ ಚೆಲ್ಲುವುದನ್ನು ತಡೆಗಟ್ಟಬಹುದು. ಬರಿ ಸ್ಪೂನ್ ಇಟ್ಟರೆ ಸಾಕಾಗಲ್ಲ ಆಗಾಗ ತಿರುಗಿಸುತ್ತಾ ನೀವು ಹಾಲನ್ನು ಕಾಯಿಸಿದರೆ ಹಾಲು ಉಕ್ಕಿ ಬಂದು ಪಾತ್ರೆಯಿಂದ ಹೊರ ಚೆಲ್ಲಲ್ಲ.
ಎರಡು ಪಾತ್ರೆ ಬಳಸುವುದು- ಒಂದು ದೊಡ್ಡ ಪಾತ್ರೆ ತೆಗೆದು ಅದರಲ್ಲಿ ಅರ್ಧದಷ್ಟು ನೀರು ಹಾಕಿ, ನಂತರ ಆ ಪಾತ್ರೆಯೊಳಗೆ ಹಾಲಿನ ಪಾತ್ರೆ ಇಟ್ಟು ಕುದಿಸಿ, ಈ ರಿತಿ ಕುದಿಸಿದರೆ ಹಾಲು ಕುದಿ ಬಂದು ಹೊರ ಚೆಲ್ಲಲ್ಲ. ನೀವು ನೀರು ಹಾಕಲು ದೊಡ್ಡ ಪಾತ್ರೆ ಬಳಸಬೇಕು. ಸೌಟ್‌ನಿಂದ ತಿರುಗಿಸುತ್ತಾ ಇರುವುದು- ಹಾಲು ಕುದಿ ಬರಲಾರಂಭಿಸಿದಾಗ ಸೌಟ್‌ನಿಂದ ತಿರುಗಿಸುತ್ತಾ ಇದ್ದರೆ ಹಾಲು ಉಕ್ಕಿ ಬರಲ್ಲ. ಆದರೆ ಈ ವಿಧಾನದಲ್ಲಿ ಹಾಲನ್ನು ಕಾಯಿಸಲು ಇಟ್ಟರೆ ಅಲ್ಲೇ ನಿಲ್ಲಬೇಕಾಗುತ್ತದೆ,.
ಹಾಲನ್ನು ಕುದಿಸಿ ಒಂದು ಲೀಟರ್ ಹಾಲನ್ನು ಅರ್ಧ ಲೀಟರ್‌ನಷ್ಟು ಮಾಡುವಾಗ ಈ ವಿಧಾನ ಸಹಾಯ ಮಾಡುತ್ತದೆ.