ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯಿತಿ ನೇತೃತ್ವದಲ್ಲಿ ಪೊವ್ವಲ್ ಬೆಂಚ್‍ಕೋರ್ಟ್ ವಠಾರದಲ್ಲಿ ಕಾರಡ್ಕ ಬ್ಲಾಕ್‍ಪಂಚಾಯಿತಿ ಮೈದಾನದಲ್ಲಿ ಜ.12ರ ವರೆಗೆ ನಡೆಯಲಿರುವ 'ಫೇಮ್-2025' (ಎಫ್‍ಎಎಂಇ-ಫಾರ್ಮರ್ಸ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಎಕ್ಸ್‍ಪೋ) ಕೃಷಿಮಾರುಕಟ್ಟೆ ಮೇಳವನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿದರು.ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭ ಪದ್ಮಶ್ರೀ ಸತ್ಯನಾರಾಯಣ ಬೆಳ್ಳೇರಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣ ಸನ್ಮಾನಿಸಿದರು. ಮೇಳದ ಲಾಂಛನ ವಿನ್ಯಾಸ ಮಾಡಿದ ಅರ್ಜುನ್ ಪರಪ್ಪ ಅವರಿಗೆ ಪಿ ರಾಘವೇಂದ್ರ ಸ್ಮರಣಿಕೆ ನೀಡಿದರು. ಮೇಳದ ಹೆಸರನ್ನು ಸೂಚಿಸಿದ ಪ್ರದೀಪ್ ಅವರನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಅಭಿನಂದಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ವಿ.ಮಿನಿ, ಎ.ಪಿ.ಉಷಾ, ಎಂ.ಧನ್ಯ, ಹಮೀದ್ ಪೆÇಸಲಿಗೆ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಎ.ಸುರೇಂದ್ರನ್, ಎಂ.ಕುಞಂಬು ನಂಬಿಯಾರ್, ಕೆ ನಳಿನಿ, ವೈ ಯಶೋದಾ, ಎನ್ ರವಿ ಪ್ರಸಾದ್, ವಸಂತಿ ಗೋಪಾಲನ್, ಚನಿಯ ನಾಯಕ್, ಬಿ ಕೃಷ್ಣನ್, ಸಾವಿತ್ರಿ ಬಾಲನ್, ಎಸ್ ಎಂ ಮಹಮ್ಮದ್‍ಕುಞÂ, ನಬೀಸಾ ಸತ್ತಾರ್, ಎನ್ ಎ ಮಜೀದ್, ಡಾ. ಶಮೀಮಾ ತನ್ವೀರ್, ಎಂ ಮಾಧವನ್, ಮಣಿಕಂಠನ್, ಕೆಬಿ ಮೊಹಮ್ಮದ್‍ಕುಞÂ, ಬಡುವನ್ ಕುಞÂ ಉಪಸ್ಥಿತರಿದ್ದರು. ಬಿ.ಕೆ.ನಾರಾಯಣನ್ ಸ್ವಾಗತಿಸಿದರು. ಬಿ.ಗಿರೀಶ್ ವಂದಿಸಿದರು.
ಸಿಪಿಸಿಆರ್‍ಐ ಕೃಷಿ ಇಲಾಖೆ, ಹೈನುಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ಪ್ಲಾಂಟೇಶನ್, ಪಶುಸಂಗೋಪನೆ, ಅರಣ್ಯ ಮತ್ತು ವನ್ಯಜೀವಿ, ಕುಟುಂಬಶ್ರೀ ಹೀಗೆ ವಿವಿಧ ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಸರ್ಕಾರ, ಸರ್ಕಾರೇತರ ಮಳಿಗೆಗಳು ಪಾಲ್ಗೊಳ್ಳಲಿದೆ.
ಹಗಲಿನಲ್ಲಿ ವಿವಿಧ ತರಗತಿ, ಸಂಜೆ ವಿಚಾರ ಸಂಕಿರಣ ಮತ್ತು ಸಂಜೆ ಕಲಾ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಉದ್ಯಮಶೀಲತೆಯ ಅವಕಾಶಗಳು, ಆಧುನಿಕ ಅಣಬೆ ಕೃಷಿ, ಜೇನುಸಾಕಣೆಯ ಮೂಲಕ ಉತ್ಪಾದನೆ ಹೆಚ್ಚಳ, ರಸಗೊಬ್ಬರ ಬಳಕೆ ಮತ್ತು ಕೀಟ ನಿರ್ವಹಣೆಯ ಆಧುನಿಕ ವಿಧಾನಗಳಂತಹ ವಿವಿಧ ವಿಷಯಗಳ ಕುರಿತು ತರಗತಿಗಳು ನಡೆಯಲಿದೆ. ಪ್ರಮುಖ ಪುಸ್ತಕ ಪ್ರಕಾಶಕರಿಂದ ಪುಸ್ತಕೋತ್ಸವ ನಡೆಯಲಿದೆ.