ನ್ಯೂಯಾರ್ಕ್‌ನ ಕೋರ್ಟ್ ಶಿಕ್ಷೆ ಪ್ರಕಟಿಸುವ ದಿನಾಂಕವನ್ನು ಮುಂದೂಡಲು ನಿರಾಕರಿಸಿದ ನಂತರ ಟ್ರಂಪ್ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದಲ್ಲಿ ಟ್ರಂಪ್ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ ಅಥವಾ ದಂಡ ವಿಧಿಸುವುದಿಲ್ಲ ಎಂದು ನ್ಯಾಯಾಧೀಶ ಜುವಾನ್ ಎಂ.ಮೆರ್ಷಾನ್ ಅವರು ಸೂಚ್ಯವಾಗಿ ಹೇಳಿದ್ದರು.
ಟ್ರಂಪ್ ವಿರುದ್ಧದ 34 ಆರೋಪಗಳು ಸಾಬೀತಾಗಿದ್ದರಿಂದ ಕೋರ್ಟ್ ಅವರನ್ನು ಅಪರಾಧಿ ಎಂದು ಮೇ ತಿಂಗಳಿನಲ್ಲಿ ಘೋಷಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.