ಬದಿಯಡ್ಕ: ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರÀ ಭಟ್(84) ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದ ಬಳಿಕ ಸ್ವಗೃಹದಲ್ಲಿ ನಿಧನರಾದರು.
ವಿಶ್ವೇಶ್ವರ ಭಟ್ ಅವರು ಕಳೆದ ಕೆಲವು ವರ್ಷಗಳಿಂದ ನೀರ್ಚಾಲಲ್ಲಿ ಶ್ರೀಶ್ರೀಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯನ್ನು ನಡೆಸುತ್ತಿದ್ದರು. ತಿರುವನಂತಪುರಂ,ವರದಹಳ್ಳಿ, ಹರಿಹರಪುರ ಮೊದಲಾದೆಡೆ ದಶಕಗಳ ಕಾಲ ವೇದಪಾಠ ಶಿಕ್ಷಕರಾಗಿದ್ದರು. ಪ್ರಸಿದ್ದ ಕಿಳಿಂಗಾರು ವೈದಿಕ ಮನೆತನದವರಾದ ಇವರು ಶೃಂಗೇರಿಯಲ್ಲಿ ವೈದಿಕ ಶಿಕ್ಷಣ ಪೂರೈಸಿ ವೇದ-ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು. ಈಶ, ಮಾಂಡುಕ್ಯ, ತೈತ್ತರೀಯ ಸಹಿತ ಹಲವು ಉಪನಿಷತ್ತುಗಳಲ್ಲಿ ಆಳವಾದ ಅಧ್ಯಯನಶೀಲರಾಗಿದ್ದು, ಕಂಠಸ್ಥರಾಗಿದ್ದರು. ವೈದಿಕ ವಿದ್ವಾಂಸ ದಿ.ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ಸಹೋದದರರಾಗಿದ್ದು, ಕಾಂಚಿ ಕಾಮಕೋಟಿ ಶಂಕರ ಪೀಠದ ಹಿರಿಯ ಸ್ವಾಮಿಗಳಾದ ಜಯೇಂದ್ರ ಸರಸ್ವತಿಗಳೊಂದಿಗೆ ನಿಕಟರಾಗಿ ಪ್ರಿಯ ಶಿಷ್ಯರಾಗಿದ್ದರು.ಮೃತರು ಪತ್ನಿ ಸಹಿತ ಅಪಾರ ಬಂಧುಮಿತ್ರರು, ಶಿಷ್ಯವೃಂದವನ್ನು ಅಗಲಿದ್ದಾರೆ.
ವಿಶ್ವೇಶ್ವರ ಭಟ್ ಅವರು ವರ್ಷಗಳ ಹಿಂದೆ ಸಮರಸ ಸುದ್ದಿ ಚಾನಲ್ ಗೆ ವಿಸ್ಕøತ ಸಂದರ್ಶನ ನೀಡುವ ಮೂಲಕ ತಮ್ಮ ಬದುಕು-ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ್ದರು.